ಜಿಲ್ಲೆ

ಅಥ್ಲೆಟಿಕ್ಸ್‌ನಲ್ಲಿ ಬಿಜಿಎಸ್ ಬಾಲಕಿಯರು ಪ್ರಥಮ


ಕೊಡಗು : ಸೋಮವಾರಪೇಟೆಯ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಶುಕ್ರವಾರ ನಡೆದ ಪ್ರೌಢಶಾಲಾ ವಿಭಾಗ ಎ. ವಲಯ ಮಟ್ಟದ ಅಥ್ಲೆಟಿಕ್ಸ್ ರಿಲೇ ಬಾಲಕಿಯರ ವಿಭಾಗದಲ್ಲಿ ಗೌಡಳ್ಳಿ ಬಿಜಿಎಸ್ ಶಾಲೆ ಪ್ರಥಮ, ಚೌಡ್ಲು ವಿಶ್ವಮಾನವ ಕುವೆಂಪು ದ್ವಿತೀಯ ಹಾಗು ನೇರುಗಳಲೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆಯಿತು.


ಬಾಲಕರ ವಿಭಾಗದಲ್ಲಿ ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ(ಪ್ರ), ನೇರುಗಳಲೆ(ದ್ವಿ), ಎಸ್‌ಜೆಎಂ ಸೋಮವಾರಪೇಟೆ(ತೃ) ಸ್ಥಾನ ಪಡೆಯಿತು. 200ಮೀ ಬಾಲಕರ ಓಟದಲ್ಲಿ ಎಸ್‌ಜೆಎಂ ಶಾಲೆಯ ಹೇಮಂತ್(ಪ್ರ), ಪಾಲಾಕ್ಷ(ದ್ವಿ), ಕುವೆಂಪು ಶಾಲೆಯ ಗೌತಮ್(ತೃ), ಬಾಲಕಿಯರ ವಿಭಾಗದಲ್ಲಿ ಕುವೆಂಪು ಶಾಲೆಯ ರಹಸ್ಯ(ಪ್ರ), ಬಿಜಿಎಸ್ ಮೋಕ್ಷ(ದ್ವಿ), ಕುವೆಂಪು ಜೀವಿತ(ತೃ), 3000 ಮೀ ಓಟದಲ್ಲಿ ಬಿಜಿಎಸ್ ಹನಿ(ಪ್ರ), ಎಸ್‌ಜೆಎಂ ಅಂಕಿತಾ(ದ್ವಿ), ಸ್ಥಾನ ಪಡೆದರು.


ತಟ್ಟೆ ಎಸೆತದಲ್ಲಿ ಬಿಜಿಎಸ್ ಡಿ.ಪಿ.ಮೊನಿಷಾ(ಪ್ರ), ನೇರುಗಳಲೆ ಇಂಪು(ದ್ವಿ), ಎಸ್‌ಜೆಎಂ ಕುಮಾರಿ(ತೃ). ಬಾಲಕರ ವಿಭಾಗದಲ್ಲಿ ಗೋಣಿಮರೂರು ಶಾಲೆಯ ಉಲ್ಲಾಸ್(ಪ್ರ), ಸೋಮವಾರಪೇಟೆ ಪ್ರೌಢಶಾಲೆಯ ದುಶ್ಯಂತ್(ದ್ವಿ), ಅರ್ಜುನ್ ತೃತೀಯ.


ಭರ್ಜಿ ಎಸೆತದಲ್ಲಿ ನೇರುಗಳಲೆ ಶಾಲೆಯ ಸೀಮಾ (ಪ್ರ), ಸೋಮವಾರಪೇಟೆ ಶಾಲೆಯ ಸಂಜನಾ(ದ್ವಿ), ಕುವೆಂಪು ಶಾಲೆಯ ಜೀವಿತ(ತೃ), ಬಾಲಕರ ವಿಭಾಗದಲ್ಲಿ ನೇರುಗಳಲೆ ಅರ್ಜುನ್‌ಗೌಡ(ಪ್ರ), ಸಾಂಧೀಪನಿ ಶಾಲೆಯ ಗುರುಪ್ರಸಾದ್(ದ್ವಿ), ಸೋಮವಾರಪೇಟೆ(ತೃ) ಸ್ಥಾನ ಗಳಿಸಿದ್ದಾರೆ.
ಲಾಂಗ್‌ಜಂಪ್‌ನಲ್ಲಿ ಸಾಂದೀಪನಿ ಜಾಸ್ಮೀನ್(ಪ್ರ), ನೇರುಗಳಲೆ ಸಂಜನಾ(ದ್ವಿ) ಬಿಜಿಎಸ್ ಖುಷಿ(ತೃ), ಬಾಲಕರ ವಿಭಾಗದಲ್ಲಿ ಸೋಮವಾರಪೇಟೆ ಶಾಲೆಯ ದುಶ್ಯಂತ್(ಪ್ರ), ಸಾಂದೀಪನಿ ಚಿರಾಗ್(ದ್ವಿ), ಎಸ್‌ಜೆಎಂ ಹೇಮಂತ್(ತೃ) ಸ್ಥಾನಗಳಿಸಿದ್ದಾರೆ.