ಜಿಲ್ಲೆ

ಅಥಣಿ ಶಿವಯೋಗಿಗಳು ಅಪ್ಪಟ ಬಸವ ಅಭಿಮಾನಿ

ಚಿತ್ರದುರ್ಗ: ತಾವು ಮಠಾಧಿಪತಿಗಳಾಗದೆ,ನೂರಾರು ಸ್ವಾಮೀಜಿಗಳನ್ನು ಮಠಾಧಿಪತಿಗಳನ್ನಾಗಿ ಮಾಡಿದ ಕೀರ್ತಿ ಅಥಣಿ ಶಿವಯೋಗಿಗಳಿಗೆ ಸಲ್ಲುತ್ತದೆ ಎಂ ದು ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು. ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾಮಠದಲ್ಲಿ ಗುರುವಾರ ಆಯೋಜಿಸಿದ್ದ ಅಥ ಣಿ ಶ್ರೀ ಮುರುಘೇಂದ್ರ ಶಿವಯೋಗಿಗಳ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿ,ಶಿವಯೋಗಿಗಳು ಅಪ್ಪಟ ಬಸವ ಅಭಿಮಾನಿಗಳಾಗಿದ್ದ ರು. ಬಸವತತ್ತ್ವದ ನಿಷ್ಠರಾಗಿದ್ದರು ಎಂದರು.

ಶ್ರೀ ಮೋಟಗಿಮಠದ ಶ್ರೀ ಪ್ರಭುಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ,ಶತಮಾನಗಳಿಂದ ಮೌಲಿಕ ಮತ್ತು ಮಹತ್ವದ ಕಾರ‌್ಯಗಳ ಬಹುದೊಡ್ಡ ಶಕ್ತಿ ಮುರುಘ ಪರಂಪರೆಯಾಗಿದೆ.ಇವತ್ತಿನ ಸಂವಿಧಾನದ ಆಶಯಗಳ ಬಸವಾದಿ ಶರಣರು ಈ ಹಿಂದೆಯೇ ಜಾರಿಗೆ ತಂದಿದ್ದರು. ಶೋಷಿತರ ಪರವಾಗಿ ಸಮಸಮಾಜದ ನಿರ್ಮಾಣದ ಸಮತ್ವದ ಭಾವ ಅಥಣಿ ಶಿವಯೋಗಿಗಳಲ್ಲಿ ಇತ್ತು ಎಂದರು. ಡಾ.ಬಸವಕುಮಾರ ಸ್ವಾಮೀಜಿ ಮಾತ ನಾಡಿದರು. ನಿಡುಸೂಸಿ ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ,ಇಳಕಲ್‌ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ,ಶ್ರೀ ಬಸವರಾಜ ದೇವರು ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ವಚನ ಪ್ರಾರ್ಥಿಸಿದರು.ಶ್ರೀ ಬಸವಮಹಾಂತ ಸ್ವಾಮೀಜಿ ಸ್ವಾಗತಿಸಿ,ನವೀನಮಸ್ಕಲ್ ನಿರೂಪಿಸಿದರು.

---