ಅಥಣಿ: ಪಟ್ಟಣದ ಮಿನಿವಿಧಾನ ಸೌಧದಲ್ಲಿ ಗುರುವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಕಾರ್ಯ ನಡೆಯಿತು. 27 ವಾರ್ಡ್‌ಗಳ ಪೈಕಿ ಕಾಂಗ್ರೆಸ್-15, ಬಿಜೆಪಿ- 9 ಹಾಗೂ 3 ಪಕ್ಷೇತರರು ಆಯ್ಕೆಯಾಗಿದ್ದಾರೆ. 99 ಅಭ್ಯರ್ಥಿಗಳು ಕಣದಲ್ಲಿದ್ದರು. ಹೆಚ್ಚಿನ ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ಗೆಲುವಿನ ನಗೆ ಬೀರಿತು.
ವಿಜೇತರ ವಿವರ: ವಾರ್ಡ್1-ಬೇಬಿಜಾನ್ ತಾಂಬೋಳಿ(ಬಿಜೆಪಿ), ವಾರ್ಡ್-2 ಕಲ್ಲಪ್ಪ ಮಡ್ಡಿ(ಬಿಜೆಪಿ), ವಾರ್ಡ್-3 ಸಂತೋಷ ಸಾವಡಕರ್(ಬಿಜೆಪಿ), ವಾರ್ಡ್- 4 ದತ್ತಾ ವಾಸ್ಟರ(ಪಕ್ಷೇತರ), ವಾರ್ಡ್-5 ಭುವನೇಶ್ವರಿ ಯಂಕಂಚಿ(ಕಾಂಗ್ರೆಸ್), ವಾರ್ಡ್-6 ಉದಯಕುಮಾರ ಸೊಳಸಿ (ಕಾಂಗ್ರೆಸ್), ವಾರ್ಡ್-7 ಸೈಯದ್ ಅಮಿನ್ ಗದ್ಯಾಳ(ಕಾಂಗ್ರೆಸ್), ವಾರ್ಡ್-8 ಶಾಂತಾ ಲೋನಾರಿ(ಪಕ್ಷೇತರ), ವಾರ್ಡ್-9 ಲತಾ ಭಜಂತ್ರಿ(ಬಿಜೆಪಿ), ವಾರ್ಡ್-10 ರಮೇಶ ಗಾಡಿವಡ್ಡರ(ಕಾಂಗ್ರೆಸ್), ವಾರ್ಡ್-11 ರಾವಸಾಬ ಐಹೊಳೆ(ಕಾಂಗ್ರೆಸ್), ವಾರ್ಡ್- 12 ಬಸವರಾಜ ಪಾಟೀಲ(ಬಿಜೆಪಿ), ವಾರ್ಡ್-13 ಮಲ್ಲೇಶ ಹುದ್ದಾರ(ಪಕ್ಷೇತರ), ವಾರ್ಡ್-14 ಮೃಣಾಲಿನಿ ದೇಶಪಾಂಡೆ (ಬಿಜೆಪಿ), ವಾರ್ಡ್-15 ಪ್ರಮೋದ ಬಿಳ್ಳೂರ(ಕಾಂಗ್ರೆಸ್), ವಾರ್ಡ್-16 ಮಲ್ಲಿಕಾರ್ಜುನ ಬುಟಾಳೆ(ಕಾಂಗ್ರೆಸ್), ವಾರ್ಡ್-17 ಶಿವಲೀಲಾ ಬುಟಾಳೆ(ಕಾಂಗ್ರೆಸ್), ವಾರ್ಡ್-18 ರಕುಮಾಬಾಯಿ ಗಡದೆ(ಕಾಂಗ್ರೆಸ್), ವಾರ್ಡ್-19 ರಿಯಾಜ್ ಸನದಿ(ಕಾಂಗ್ರೆಸ್), ವಾರ್ಡ್-20 ರಾಜಶೇಖರ ಗುಡೋಡಗಿ(ಬಿಜೆಪಿ), ವಾರ್ಡ್-21 ವಿಲಿನರಾಜ ಯಳಮಲ್ಲೆ(ಕಾಂಗ್ರೆಸ್), ವಾರ್ಡ್-22 ವಿದ್ಯಾ ಬುಲಬುಲೆ(ಬಿಜೆಪಿ), ವಾರ್ಡ್-23 ಜುಲೆಖಾಬಿ ಖೇಮಲಾಪುರ(ಕಾಂಗ್ರೆಸ್), ವಾರ್ಡ್-24 ವಿದ್ಯಾ ಹಳ್ಳದಮಳ(ಕಾಂಗ್ರೆಸ್), ವಾರ್ಡ್-25 ವಿದ್ಯಾ ಐಹೊಳೆ(ಕಾಂಗ್ರೆಸ್), ವಾರ್ಡ್-26 ಬಸವರಾಜ ನಾಯಿಕ(ಬಿಜೆಪಿ), ವಾರ್ಡ್-27 ಸುನೀತಾ ಬಡಕಂಬಿ(ಕಾಂಗ್ರೆಸ್) ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.
ಅಥಣಿ ಪಟ್ಟಣದ ಜನ ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾವು ಸದಾ ಬದ್ಧರಾಗಿದ್ದೇವೆ. ಪಟ್ಟಣದ ಪ್ರಗತಿಗೆ ಎಲ್ಲ ಸದಸ್ಯರ ಸಹಕಾರದಿಂದ ಪ್ರಯತ್ನಿಸಿ, ಜನತೆಯ ವಿಶ್ವಾಸ ಉಳಿಸಿಕೊಳ್ಳಲಾಗುವುದು.| ಗಜಾನನ ಮಂಗಸೂಳಿ ಕಾಂಗ್ರೆಸ್ ಹಿರಿಯ ಮುಖಂಡಮತದಾರರು ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಮುಂದಿನ ದಿನಗಳಲ್ಲಿ ತಪ್ಪು ತಿದ್ದುಪಡಿಮಾಡಿಕೊಂಡು ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸಲಾಗುವುದು.| ಚಿದಾನಂದ ಸವದಿ ಬಿಜೆಪಿ ಯುವ ಮುಖಂಡ