ಅಥಣಿ ಪಿಎಲ್​ಡಿ ಬ್ಯಾಂಕ್​ ಅಧ್ಯ ದುಂಡಪ್ಪ ಅಸ್ಕಿ ಹಾಗೂ ಉಪಾಧ್ಯ ವಿಠೋಬಾ ಮಾಳಿ ಅವರನ್ನು ಸನ್ಮಾನಿಸಲಾಯಿತು. ಪರಪ್ಪ ಸವದಿ, ಅಶೋಕ ಪಡನಾಡ, ಕಲಗೌಡ ಪಾಟೀಲ, ಹೇಮಲತಾ ಪಾಟೀಲ ಇತರರಿದ್ದರು. 
ಜಿಲ್ಲೆ

ಅಥಣಿ ಪಿಎಲ್​ಡಿ ಬ್ಯಾಂಕ್​ ಏಳಿಗೆಗೆ ಪ್ರಯತ್ನ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಅಥಣಿ: ತಾಲೂಕು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ಗೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯರಾಗಿ ದುಂಡಪ್ಪ ಅಲ್ಲಪ್ಪ ಅಸ್ಕಿ ಮತ್ತು ಉಪಾಧ್ಯರಾಗಿ ಭರತ ವಿಠೋಬಾ ಮಾಳಿ ಅವಿರೋಧ ಆಯ್ಕೆಯಾಗಿದರು. ಚುನಾವಣಾಧಿಕಾರಿಯಾಗಿ ಆರ್​.ಎನ್​.ನೂಲಿ ಕಾರ್ಯನಿರ್ವಹಿಸಿದರು.

ಅಧ್ಯ ದುಂಡಪ್ಪ ಅಸ್ಕಿ ಮಾತನಾಡಿ, ಶಾಸಕರಾದ ಲಕ್ಷ$್ಮಣ ಸವದಿ ಹಾಗೂ ರಾಜು ಕಾಗೆ ಮಾರ್ಗದರ್ಶನ ಹಾಗೂ ಆಡಳಿತ ಮಂಡಳಿ ಸದಸ್ಯರ ಸಹಕಾರದಿಂದ ಬ್ಯಾಂಕ್​ ಪ್ರಗತಿಗೆ ಶ್ರಮಿಸುವೆ ಎಂದರು.

ಮಾಜಿ ಅಧ್ಯ ಶೀತಲಗೌಡ ಪಾಟೀಲ ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಅತಿಹೆಚ್ಚು ಸಾಲ ವಸೂಲಾತಿ ಮಾಡಿ ಬ್ಯಾಂಕ್​ ಏಳಿಗೆಗೆ ಶ್ರಮಿಸೋಣ ಎಂದರು.
ಮಾಜಿ ಅಧ್ಯ ಮಹಾದೇವ ಕೋರೆ ಮಾತನಾಡಿದರು. ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯ ಪರಪ್ಪ ಸವದಿ, ಪಿಎಲ್​ಡಿ ಬ್ಯಾಂಕ್​ನ ಆಡಳಿತ ಮಂಡಳಿ ಸದಸ್ಯರಾದ ಅಶೋಕ ಪಡನಾಡ, ವಿನಯ ಪಾಟೀಲ, ಮಾನಸಿಂಗ ಮಗರ, ರವೀಂದ್ರ ಗಾಣಿಗೇರ, ಕಲಗೌಡ ಪಾಟೀಲ, ರಾಜಗೌಡ ಪಾಟೀಲ, ಸುಜಾತಾ ಖಡಕಿ, ತಂಗೆವ್ವ ಖೋತ, ಸತ್ಯಪ್ಪ ಬಿರಾದಾರ, ಅಪ್ಪಾರಾಯ ವಾಮೋರೆ, ಶ್ರೀಶೆಲ ನಾಯಿಕ, ಹೇಮಲತಾ ಪಾಟೀಲ, ವ್ಯವಸ್ಥಾಪಕ ರಾಜು ಬಂಡಿವಡ್ಡರ, ಜಾವೇದ್​ ಅತ್ತಾರ್​, ಸಂತೋಷ ಬನಸೋಡೆ ಇತರರಿದ್ದರು.