ಕಲಬುರಗಿ: ೧೬ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಹೆಚ್ಚುವರಿ ಜಿ¯್ಲÁ ಮತ್ತು ಸೆಷನ್ಸ್ ನ್ಯಾಯಾಲಯ ೩೦ ವರ್ಷ ಜೈಲು, ೩೬ ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಕಮಲಾಪುರ ತಾಲೂಕಿನ ಗ್ರಾಮವೊಂದರ ಅನಿಲ ಕರಗರ ಜೆಸಿಬಿ ಚಾಲಕನಾಗಿದ್ದು, ಬಾಲಕಿ ಶಾಲೆಗೆ ಹೋಗುವಾಗ, ಬರುವಾಗ ಪ್ರೀತಿಸುವಂತೆ ಪೀಡಿಸುತ್ತಿದ್ದ. ನಿರಾಕರಿಸಿದಾಗ ೨೦೨೪ ಏಪ್ರಿಲ್ ೨೬ರಂದು ಬೆದರಿಸಿ ಬೈಕ್ ಮೇಲೆ ಫರಹತಾಬಾದ್‌ಗೆ ಕರೆದೊಯ್ದು ಅಲ್ಲಿಂದ ಬಸ್ಸಿನಲ್ಲಿ ವಿಜಯಪುರಕ್ಕೆ ಕರೆದೊಯ್ದಿದ್ದ. ವಿಜಯಪುರದ ಮುಜಾವರ್ ಗಲ್ಲಿಯಲ್ಲಿರುವ ತನ್ನ ಅಕ್ಕನ ಮನೆಯಲ್ಲಿರಿಸಿ, ೨೦೨೪ರ ಮೇ ೯ ರವರೆಗೆ ಹಲವು ಬಾರಿ ಅತ್ಯಾಚಾರವೆ ಎಸಗಿದ್ದ. ಕಮಲಾಪುರ ಠಾಣೆ ಸಿಪಿಐ ನಾರಾಯಣ, ಪಿಎಸ್‌ಐ ಚಿದಾನಂದ ಸೌದಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿz್ದÁರೆ ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ ೫ ಲP್ಷÀ ರೂ. ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ವಾದ ಮಂಡಿಸಿದ್ದರು.