ಜಿಲ್ಲೆ

ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ

ಕಲಬುರಗಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದರ‍್ಜನ್ಯ ಎಸಗಿದ ಅಪರಾಧಿಗೆ ಜೀವಾವಧಿ ಜೈಲು ಶಿೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್​ (ವಿಶೇಷ ಪೋಕ್ಸೊ) ನ್ಯಾಯಾಲಯ ತರ‍್ಪು ನೀಡಿದೆ. ವಿಶ್ವವಿದ್ಯಾಲಯ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣದಲ್ಲಿ ಸೋನು ತಾರಾಸಿಂಗ್​ ಜಾಧವ್​ (೧೯) ಶಿೆಗೆ ಒಳಗಾದ ಅತ್ಯಾಚಾರಿ.

೨೦೨೪ ಆಗಸ್ಟ್​ ೯ರಂದು ಮನೆಮುಂದೆ ಆಟವಾಡುತ್ತಿದ್ದ ೧೦ ರ‍್ಷದ ಬಾಲಕಿಯನ್ನು ಸಂಬಂಧದಲ್ಲಿ ಚಿಕ್ಕಪ್ಪನಾಗಿರುವ ಸೋನು ಜಾಧವ್​ನು ಬಾಲಕಿಯನ್ನು ಆಕೆಯದ್ದೆ ಮನೆ ಮೇಲಿನ ಕೋಣೆಗೆ ಕರೆದೊಯ್ದಿದ್ದ. ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದ. ಈ ವೇಳೆ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೆಲ ಕ್ಷಣದ ನಂತರ ಎಚ್ಚರವಾದಾಗ ಈ ಬಗ್ಗೆ ಯಾರಿಗೂ ಹೇಳಬೇಡ ಎಂದು ಮನೆಗೆ ಹೋಗಿದ್ದ. ಬಾಲಕಿ ಮೈಮೇಲೆ ತರುಚಿದ ಗಾಯಗಳನ್ನು ಕಂಡ ಹೆತ್ತವರು ಪ್ರಶ್ನಿಸಿದಾಗ ಟನೆ ಹೊರಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ ಅತ್ಯಾಚಾರಿ ಸಂಬಂಧಿಗಳು ಕೂಡಿ ಬಾಲಕಿ ಮನೆಯವರ ಮೇಲೆ ಹಲ್ಲೆ ನಡೆಸಿದ್ದಾರೆ. ಏನೋ ತಪು$್ಪ ನಡೆದಿದೆ. ಮದುವೆ ಮಾಡಿ ಎಂದು ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಸಂಬಂಧದಲ್ಲಿ ಚಿಕ್ಕಪ್ಪನಾಗುತ್ತಾನೆ. ಮದುವೆ ಬೇಡ ಎಂದರು ದಬ್ಬಾಳಿಕೆ ನಡೆಸಿದ್ದಕ್ಕೆ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ತನಿಖಾಧಿಕಾರಿ ಪಿಎಸ್​ಐ ರೇಣುಕಾದೇವಿ, ಪಿಐ ಸುಶೀಲಕುಮಾರ ತನಿಖೆ ನಡೆಸಿ, ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣದಲ್ಲಿ ವಿವಿ ಠಾಣೆ ಸಿಬ್ಬಂದಿ ಸದಾಶಿವ, ಮಹೇಶ್ವರಿ, ಶಿವಶಂಕರ ಜಾಧವ್​, ಸುಜಾತಾ ಸಾದಾರರನ್ನು ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಜೀವಾವಧಿ ಜೈಲು ಶಿೆ, ೨೦ ಸಾವಿರ ರೂ.ದಂಡ ಶಿೆ ವಿಧಿಸಿ, ಆದೇಶಿಸಿದ್ದಾರೆ. ರ‍್ಕಾರದ ಪರವಾಗಿ ವಿಶೇಷ ರ‍್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದ ಮಂಡಿಸಿದ್ದರು.