ಕಲಬುರಗಿ: ಆಳಂದ ತಾಲೂಕಿನ ಗ್ರಾಮವೊಂದರ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ೨೦ ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ಮಹಾರಾಷ್ಟçದ ಅಮರಾವತಿ ಜಿಲ್ಲೆಯ ಅರಳಾ ಗ್ರಾಮದ ವಿಕ್ಕಿ ವಾನಖಡೆ (೨೫) ಅಪರಾಧಿ. ಆಳಂದ ತಾಲೂಕಿನ ಗ್ರಾಮವೊಂದರ ಬಾಲಕಿಯ ಜತೆ ಇನ್‌ಸ್ಟಾ ಗ್ರಾಮ್‌ನಲ್ಲಿ ಚಾಟ್ ಮಾಡಿರುವ ಸ್ಕಿöçÃನ್ ಶಾಟ್ ಚಿತ್ರ, ವಿಡಿಯೋಗಳು, ಫೋಟೋಗಳನ್ನು ಬಹಿರಂಗ ಪಡಿಸಿ, ಮರ್ಯಾದೆ ತೆಗೆಯುತ್ತೇನೆ ಎಂದು ಬ್ಲಾÈಕ್ ಮೇಲ್ ಮಾಡಿ, ೨೦೨೩ ಮಾರ್ಚ್ ೧೬ರಂದು ಯುವಕ ವಿಕ್ಕಿ ವಾನಖಡೆ ಬಾಲಕಿಯನ್ನು ಅಮರಾವತಿಗೆ ಕರೆದುಕೊಂಡು ಹೋಗಿದ್ದಾನೆ. ಮಾ.೧೮ರಂದು ತನ್ನ ಸ್ವಗ್ರಾಮ ಅರಳಾಕ್ಕೆ ಕರೆದುಕೊಂಡು ಹೋಗಿ, ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಮಹಾದೇವ ಪಂಚಮುಖಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಪೋಕ್ಸೋ ಕಾಯ್ದೆ ಅಡಿ ೨೦ ವರ್ಷ ಜೈಲು ಶಿಕ್ಷೆ, ೨೦ ಸಾವಿರ ರೂ. ದಂಡ ವಿಧಿಸಿದ್ದಾರೆ. ಕಾನೂನು ಪ್ರಾಧಿಕಾರದಿಂದ ನೊಂದ ಬಾಲಕಿಗೆ ಐದು ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಆಳಂದ ಠಾಣೆ ಸಿಬ್ಬಂದಿ ರಾಜಕುಮಾರ, ಗುಂಡುರಾವ ಸಾಕ್ಷಿದಾರರನ್ನು ಹಾಜರುಪಡಿಸಿದ್ದರು.