ಕಲಬುರಗಿ: ಮೋಸಕ್ಕೆ ಒಳಗಾಗಿದ್ದ ನನ್ನ ಮೇಲೆ ಅತ್ಯಾಚಾರ ಮಾಡಿದ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ನಾಲ್ಕು ತಿಂಗಳಾದರೂ ಕ್ರಮ ಕೈಗೊಂಡಿಲ್ಲ. ಪ್ರಕರಣ ನಗರದ ಸ್ಟೇಷನ್ ಬಜಾರ್ ಠಾಣೆಗೆ ರ‍್ಗಾವಣೆಯಾಗಿದ್ದರೂ ಆರೋಪಿಗಳನ್ನು ಬಂಧಿಸದೆ ಪೊಲೀಸರು ಅನ್ಯಾಯ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದರು.
ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆತ್ಮಹತ್ಯೆಗೆ ನರ‍್ಧರಿಸಿದ್ದ ಬಗ್ಗೆ ಪೊಲೀಸ್ ಅಧಿಕಾರಿಗೆ ತಿಳಿಸಿದರೂ ಸ್ಪಂದಿಸಿಲ್ಲ. ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸಬೇಕು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಹಿನ್ನೆಲೆ: ಅÀಜಲಪುರ ತಾಲೂಕಿನ ಶಿರವಾಳ ಗ್ರಾಮದ ಸುಶೀಲ್ ನಿಂಬಾಳಕರ್ ನನಗೆ ಮೋಸ ಮಾಡಿz್ದÁನೆ. ನಾನು ಸೊ¯್ಲÁಪುರ ಜಿ¯್ಲೆಯಿಂದ ಕಲಬುರಗಿ ನಗರದ ಪಿಜಿಯೊಂದರಲ್ಲಿ ಇದ್ದೆ. ಸ್ನೇಹಿತೆ ಒತ್ತಾಯದಿಂದ ಸುಶೀಲ್ ಜತೆ ಮದುವೆ ಮಾಡಿಸುವುದಾಗಿ ನಂಬಿಸಿದ್ದರು. ೨೦೨೩ರ ಡಿಸೆಂಬರ್‌ನಲ್ಲಿ ರಾತ್ರಿ ವೇಳೆ ರೆಸ್ಟೋರೆಂಟ್‌ನಲ್ಲಿ ಊಟದ ನಂತರ ನಾನು ಬೇಡವೆಂದರೂ ನೈಟ್‌ಔಟ್ ಎಂದು ದೇವಲಗಾಣಗಾಪುರದ ಲಾಡ್ಜ್ವೊಂದಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ. ನಂತರ ಬ್ಲಾÈಕ್‌ಮೇಲ್ ಹಾಗೂ ಮದುವೆ ನೆಪದಲ್ಲಿ ಹಲವು ಬಾರಿ ದೈಹಿಕ ಸಂರ‍್ಕ ಮಾಡಿದ್ದರಿಂದ ರ‍್ಭಿಣಿಯಾಗಿz್ದÉÃನೆ. ಈ ವೇಳೆ ಸುಶೀಲ್‌ಗೆ ಮೊದಲೇ ಮದುವೆಯಾದ ವಿಷಯ ತಿಳಿದಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿಯವಳು ಎಂದು ನಿಂದಿಸಿ ಆತನ ಪತ್ನಿ, ಅತ್ತೆ, ಮಾವ ಮತ್ತು ಗೆಳೆಯರು ರ‍್ಭಪಾತ ಮಾಡಿಸುವಂತೆ ಕಿರುಕುಳ ನೀಡಿದ್ದಲ್ಲದೆ ಬೇಡವೆಂದರೂ ಏಪ್ರಿಲ್‌ನಲ್ಲಿ ಬಲವಂತದಿಂದ ರ‍್ಭಪಾತ ಮಾಡಿಸಿದ್ದಾರೆ. ಎಲ್ಲರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.