ಸುನೀಲ ದೀಪಾಳೆ 
ಜಿಲ್ಲೆ

ಅತ್ಯಾಚಾರಕ್ಕೆ ಯತ್ನಿಸಿದವಗೆ ಥಳಿತ

ರಾಯಬಾಗ: ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಟನೆ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಪಟ್ಟಣದ ಸುನೀಲ ದೀಪಾಳೆ (27) ಬಂಧಿತ ಆರೋಪಿ. ರಾಯಬಾಗ ಪಟ್ಟಣದಿಂದ ಕಂಚಕರವಾಡಿ ರಸ್ತೆಯತ್ತ ಹೋಗುತ್ತಿರುವ ಅಪ್ರಾಪ್ತೆಯನ್ನು ಡ್ರಾಪ್​ ಕೊಡುವ ನೆಪದಲ್ಲಿ ಬೈಕ್​ ಮೇಲೆ ಕೂಡ್ರಿಸಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದಾಗ ಅಪ್ರಾಪ್ತೆಯ ಚೀರಾಟದಿಂದ ಸಾರ್ವಜನಿಕರು ರಸಿ ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಯಬಾಗ ಪೊಲೀಸರು ಯುವಕನ ಮೇಲೆ ಪೋಕ್ಸೋ ಅಡಿ ಪ್ರಕರಣ ದಾಖಲಿಸಿದ್ದಾರೆ.