ಜಿಲ್ಲೆ

ಅತ್ಯಾಚಾರ ವಿರೋಧಿ ಹೋರಾಟ, ಕಲ್ಲು ತೂರಾಟ 9 ಜನರ ಬಂಧನ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಯಡ್ರಾಮಿಯಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನಗರದಲ್ಲಿ ಸಕಲ ಹಿಂದು ಸಮಾಜದಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬAಧಿಸಿದAತೆ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ.

ಸಾಗರ ರಾಠೋಡ, ರಾಹುಲ್ ರಾಠೋಡ, ರಮೇಶ ರಾಠೋಡ, ಅಭಿಷೇಕ ರಾಠೋಡ, ಶಂಕರ ರಾಠೋಡ, ಪ್ರದೀಪ ಪವಾರ, ಸಚಿನ್ ರಾಠೋಡ, ವಿಕಾಸ ಚವ್ಹಾಣ್, ಅಭಿಷೇಕ ಪವಾರ ಬಂಧಿತರು. ಆರು ಜನರನ್ನು ನ್ಯಾಯಾಂಗ ವಶಕ್ಕೆ ನೀಡಿದ್ದು, ಮೂವರು ಅಪ್ರಾಪ್ತರನ್ನು ಬಂಧಿಸಿ, ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರಾತ್ರೋ ರಾತ್ರಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಸೋಮವಾರ ನಡೆದ ಪ್ರತಿಭಟನೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟವಾಗಿ ಒಂದು ಆಟೋ, ಫರ್ನಿಚರ್ ಅಂಗಡಿ, ಕಾರು ಜಖಂ ಆಗಿತ್ತು.

ಈ ಕುರಿತು ಫರ್ನಿಚರ್ ಅಂಗಡಿ ಮಾಲಿಕ ಮುನಿರುದ್ದೀನ್ ಹಸನ್ ದೂರು ನೀಡಿದ್ದು, ಎಂ.ಎಚ್.ಫರ್ನಿಚರ್ ಅಂಗಡಿ ಮೇಲೆ ಟಂ ಟಂ ವಾಹನದಲ್ಲಿ ಮಾರಕಾಸ್ತçಗಳೊಂದಿಗೆ ಗುಂಪು ಕಟ್ಟಿಕೊಂಡು ಆಗಮಿಸಿ ೧೦ ಪ್ಲಾಸ್ಟಿಕ್ ಖುರ್ಚಿ, ಚಪ್ಪಲ್ ಸ್ಟಾÈಂಡ್, ಡೈನಿಂಗ್ ಟೇಬಲ್ ಸೇರಿ ೯,೭೦೦ ರೂ. ಮೌಲ್ಯದ ಸಾಮಗ್ರಿ ಒಡೆದಿದ್ದಾರೆ. ಕೆಇಬಿ ಕಚೇರಿಗೆ ಅಳವಡಿಸಿದ ಗಾಜುಗಳಿಗೆ ಕಲ್ಲೂ ತೂರಾಟ ಮಾಡಿ, ಒಡೆದಿದ್ದಾರೆ ಎಂದು ದೂರು ನೀಡಿದ್ದಾರೆ.

ಆಟೋ ಚಾಲಕ ಬಸವರಾಜ ಪಟ್ಟಣಕರ್ ಸಹ ದೂರು ನೀಡಿದ್ದು, ಪ್ರತಿಭಟನೆ ವೇಳೆ ಉದ್ರಿಕ್ತರು ಆಟೋ ಮೇಲೆ ದಾಳಿ ಮಾಡಿ, ಇಂಡಿಕೇಟರ್ ಒಡೆದಿದ್ದು, ಬಾಡಿ ಕವರ್ ಹರಿದು ಹಾಕಿದ್ದರು. ನನಗೂ ಕಲ್ಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾರೆ ಎಂದು ದೂರು ನೀಡಿದ್ದರು.

ಎರಡು ದೂರಿನಲ್ಲಿ ಆರೋಪಿಗಳಾದ ಸಾಗರ ರಾಠೋಡ, ಶ್ರೀಧರ ಚವ್ಹಾಣ್, ಪ್ರವೀಣ ಜಾಧವ್, ಯುವರಾಜ ಯಡ್ರಾಮಿ, ದಿಲೀಪ್ ರಾಠೋಡ್, ಚಂದುಲ್ಯಾ ರಾಠೋಡ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.