ಜಿಲ್ಲೆ

ಅತ್ಯಾಚಾರ, ಕೊಲೆಗೈದವರಿಗೆ ಗಲ್ಲು ಶಿಕ್ಷೆ ವಿಧಿಸಿ

ಕಲಬುರಗಿ : ಆಳಂದ ತಾಲೂಕಿನಲ್ಲಿ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಸೇರಿ ವಿವಿಧೆಡೆ ನಡೆದ ದುಷ್ಕೃತ್ಯಗಳ ತನಿಖೆಗೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಆಳಂದ ತಾಲೂಕಿನ ಹಳ್ಳಿಯೊಂದರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದಾರೆ. ಸಂತ್ರಸ್ತೆ ಹೆಸರು, ವಿಷಯ, ಪಾಲಕರ ಮಾಹಿತಿ, ಊರು ಹೀಗೆ ಎಲ್ಲ ಮಾಹಿತಿ ಬಹಿರಂಗಪಡಿಸಿ ಪೋಕ್ಸೋ ಕಾಯ್ದೆ ಉಲ್ಲಂಘಿಸಿರುವ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ, ಕೊಲೆ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಸಂತ್ರಸ್ತೆ ಕುಟುಂಬಕ್ಕೆ ೫೦ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಾವಳಗಿ(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸದಸ್ಯೆ ಮೇಲೆ ಹಲ್ಲೆ, ಅಪಹರಣ ಮತ್ತು ಕೊಲೆಯತ್ನ ನಡೆದಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಮಾಮೂಲು ಕೇಸ್ ಹಾಕಿದ್ದಾರೆ. ಸೂಕ್ತ ತನಿಖೆ ಮೂಲಕ ಅನ್ಯಾಯಕ್ಕೆ ಒಳಗಾದ ಸದಸ್ಯೆಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಉಡುಪಿಯಲ್ಲಿ ನಡೆದ ಹಿಂದು ಬಾಲಕಿಯರ ಖಾಸಗಿ ವಿಡಿಯೋ ಚಿತ್ರೀಕರಿಸಿದ ಪ್ರಕರಣ ತನಿಖೆ ಎನ್‌ಐಎಗೆ ಒಪ್ಪಿಸಬೇಕು. ಇದೊಂದು ಮಕ್ಕಳಾಟ ಎಂದು ಹಗುರವಾಗಿ ಮಾತನಾಡಿರುವ ಗೃಹ ಸಚಿವ ಡಾ.ಪರಮೇಶ್ವರ್ ಅವರನ್ನು ಸಂಪುಟದಿAದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಮೋರ್ಚಾ ನಗರ ಜಿಲ್ಲಾಧ್ಯಕ್ಷೆ ಶೋಭಾ ಬಾಗೇವಾಡಿ, ಗ್ರಾಮಾಂತರ ಜಿಲ್ಲಾಧ್ಯಕ್ಷೆ ಭಾಗೀರಥಿ ಗುನ್ನಾಪುರ, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಶಶೀಲ್ ನಮೋಶಿ, ಶಾಸಕ ಡಾ.ಅವಿನಾಶ ಜಾಧವ್, ಪಕ್ಷದ ಜಿ¯್ಲÁಅಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ, ನಗರ ಜಿಲ್ಲಾಧ್ಯಕ್ಷ ಸಿz್ದÁಜಿ ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಪ್ರಮುಖರಾದ ಚಂದು ಪಾಟೀಲ್, ಮಣಿಕಂಠ ರಾಠೋಡ್, ಮಹಾದೇವ ಬೆಳಮಗಿ, ಡಾ.ಶಂಭುಲಿAಗ ಬಳಬಟ್ಟಿ, ಉಮೇಶ ಪಾಟೀಲ್, ರಿತೀಶ್ ಗುತ್ತೇದಾರ್, ಅಶೋಕ ಬಗಲಿ, ಶಶಿಕಲಾ ಟೆಂಗಳಿ, ಶೋಭಾ ಬಾಣಿ, ಶೋಭಾ ಪಾಟೀಲ್, ಜಯಶ್ರೀ ಮತ್ತಿಮಡು, ಶರಣು ಸಜ್ಜನ್, ಸಂತೋಷ ಹಾದಿಮನಿ, ಚಂದಮ್ಮ ಪಾಟೀಲ್, ಗೌರಿ ಚಿತ್ತಕೋಟಿ, ಸುe್ಞÁನಿ ಪೋತದಾರ್, ಬಾಬುರಾವ್ ಹಾಗರಗುಂಡಗಿ ಮೊದಲಾದವರು ಪಾಲ್ಗೊಂಡಿದ್ದರು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.