ಕಲಬುರಗಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸೇಡಂ ತಾಲೂಕಿನ ತೆಲ್ಕೂರ ಗ್ರಾಮದ ಜಗನ್ನಾಥ ರಾಕನೋರ ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೋಕ್ಸೊ) ನ್ಯಾಯಾಲಯ ೨೦ ವರ್ಷ ಜೈಲು ಶಿಕ್ಷೆ ಹಾಗೂ ೨೦ ಸಾವಿರ ರೂ. ದಂಡ ವಿಧಿಸಿದೆ.
ಅಪ್ರಾಪ್ತ ಬಾಲಕಿ ಎಂಬುದು ಗೊತ್ತಿದ್ದರೂ ಬಲವಂತವಾಗಿ ಕರೆದುಕೊಂಡು ಹೋಗಿ, ೨೦೨೨ರ ಏಪ್ರಿಲ್ ೧೪ರಿಂದ ೨೭ರವರೆಗೆ ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದಲ್ಲದೇ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿದ್ದ. ಈ ಕುರಿತು ಪೋಷಕರ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸೇಡಂ ಸಿಪಿಐ ಆನಂದರಾವ ಎಸ್‌ಎನ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಶಿಕ್ಷೆ ಪ್ರಕಟಿಸಿದರು.
ಪೋಕ್ಸೊ ಕಾಯ್ದೆಯ ೨೦ ವರ್ಷ ಜೈಲು ಶಿಕ್ಷೆಯ ಜತೆಗೆ ಐಪಿಸಿ ಸೆಕ್ಷನ್ ಅಡಿ ಎರಡು ವರ್ಷ ಜೈಲು ಹಾಗೂ ೨ ಸಾವಿರ ರೂ. ದಂಡ, ಬಾಲಕಿಯ ಅಪಹರಣಕ್ಕಾಗಿ ಐದು ವರ್ಷ ಜೈಲು, ೫ ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿz್ದÁರೆ. ತಿಂಗಳೊಳಗೆ ಬಾಲಕಿ ಕುಟುಂಬಕ್ಕೆ ೫ ಲP್ಷÀ ರೂ. ಪರಿಹಾರ ನೀಡುವಂತೆ ಕಾನೂನು ಪ್ರಾಧಿಕಾರಕ್ಕೆ ಆದೇಶ ನೀಡಿz್ದÁರೆ. ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದ ಮಂಡಿಸಿದ್ದರು.