ಜಿಲ್ಲೆ

ಅತಿವೃಷ್ಟಿ ಪ್ರದೇಶಕ್ಕೆ ಬೆಲ್ದಾಳೆ ಭೇಟಿ

ಬೀದರ್: ಚಿಟ್ಟಾ ಜಿಪಂ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶಕುಂತಲಾ ಬೆಲ್ದಾಳೆ, ತಹಸೀಲ್ದಾರ್ ಎಚ್.ಸಿ. ಗಂಗಾದೇವಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಷ್ಟೂರ ಗ್ರಾಮಕ್ಕೆ ಭೇಟಿ ನೀಡಿ ಭಾರಿ ಮಳೆಯಿಂದ ಶಶಿಕಲಾ ಕಂಟೆಪ್ಪ, ಹಣಮಂತ ಶಿವರಾಜ, ಶಂಕರ ಭೀಮಣ್ಣ ಮನೆಗಳು ಕುಸಿದಿರುವುದನ್ನು ಪರಿಶೀಲಿಸಿದರು. ಮನೆ ಕಳೆದುಕೊಂಡು ಕಷ್ಟದಲ್ಲಿರುವ ಕುಟುಂಬದವರಿಗೆ ಸಾಂತ್ವಾನ ಹೇಳಿದ ಬೆಲ್ದಾಳೆ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಗ್ರಾಪಂನ ವಿವಿಧ ಯೋಜನೆಗಳಡಿ ಮನೆ ಮಂಜೂರು ಮಾಡಲು ಪಿಡಿಒಗೆ ಸೂಚಿಸಿದರು.

ಬೀದರ್-ಅಷ್ಟೂರ ರಸ್ತೆ ಸೇತುವೆ ತೀರ ಕೆಳಮಟ್ಟದಲ್ಲಿ ಇದ್ದುದರಿಂದ ಭಾರಿ ಮಳೆಯಾದಾಗ ಮೇಲಿಂದ ನೀರು ಹರಿದು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸೇತುವೆ ಮೇಲ್ದರ್ಜೆಗೇರಿಸುವ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರುವೆ ಎಂದರು.

ತಾಪಂ ಸದಸ್ಯೆ ರೇಣುಕಾ ನರಸಪ್ಪ, ಗ್ರಾಪಂ ಅಧ್ಯಕ್ಷ ಮಹಾದೇವ ಪಾಟೀಲ್, ಸದಸ್ಯರಾದ ರಾಜಕುಮಾರ, ದಯಾನಂದ ಇದ್ದರು.