ಕೊಡೇಕಲ್: ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರಬರೆಯುವ ಅಭಿಯಾನಕ್ಕೆ ಪ್ಯಾಟಿ ಬಸವೇಶ್ವರ ದೇವಸ್ಥಾನದಲ್ಲಿ ಅತಿಥಿ ಶಿಕ್ಷಕರು ಚಾಲನೆ ನೀಡಿದರು.
ಹಿರಿಯ ಅತಿಥಿ ಶಿಕ್ಷಕ ರಾಜು ಬಿರಾದಾರ ಮಾತನಾಡಿ, ರಾಜ್ಯದ ೩೧ ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ೪೫ ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಶಾಲೆ ಆರಂಭದಿAದಲೂ ಈವರೆಗೆ ಗೌರವಧನ ಸಿಗದೆ ಆರ್ಥಿಕ ಸಮಸ್ಯೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿz್ದೆÃವೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದರೂ ಕೂಡ ಸರಿಯಾದ ಸಮಯಕ್ಕೆ ಗೌರವಧನ ಸಿಗದೆ ಮತ್ತೊಂದು ಕೆಲಸವೂ ಇಲ್ಲದೆ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ತಮ್ಮ ಸಂಕಷ್ಟ ತೋಡಿಕೊಂಡರು.
ಬೋರಮ್ಮ ಹೂಗಾರ ಮಾತನಾಡಿ, ನಮ್ಮ ಬೇಡಿಕೆ ಬಗ್ಗೆ ಸಾಕಷ್ಟು ಬಾರಿ ಇಲಾಖೆ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಘ್ರ ನಮ್ಮ ಬೇಡಿಕೆ ಈಡೇರಿಸದಿದ್ದರೆ ರಾಜ್ಯಾದ್ಯಂತ ಶಾಲೆ ತೊರೆಯುವ ಅಭಿಯಾನ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು. ಈ ವೇಳೆ ದೇವಸ್ಥಾನದಿಂದ ಪಾದಯಾತ್ರೆ ಮೂಲಕ ಅಂಚೆ ಕಚೇರಿವರೆಗೆ ತೆರಳಿ ಪತ್ರ ಅಭಿಯಾನ ನಡೆಸಿದರು.
ಅತಿಥಿ ಶಿಕ್ಷಕರಾದ ರಾಘವೇಂದ್ರ ಗುತ್ತೇದಾರ್, ಪ್ರಶಾಂತ ಪತ್ತಾರ, ಶಶಿ ಪತ್ತಾರ, ಕಾನೇಶ ಹೊಸೂರು, ಬಸಪ್ಪ ಮದರಿ, ರವಿಕುಮಾರ ಕಲ್ಲೂರ, ನಿಂಗಣ್ಣ ಮೇಲಿನಮನಿ, ಸುಜಾತಾ, ಮೊಸಂಬಿ, ಭಾಗ್ಯಶ್ರೀ ಬಿರಾದಾರ, ಶಶಿಕುಮಾರ ಬರದೇವನಾಳ, ಕನ್ಯಾಕುಮಾರಿ ದೊರಿ, ಬ್ರಹ್ಮಪುತ್ರ, ಪುಷ್ಪಾವತಿ ಇತರರಿದ್ದರು.