ಜಿಲ್ಲೆ

ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

ಚಾಮರಾಜನಗರ: ತಾಲೂಕಿನ ರಂಗಸಂದ್ರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ 2025-26ನೇ ಸಾಲಿಗೆ ಆರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಆಂಗ್ಲ ಭಾಷೆ ಹಾಗೂ ದೈಹಿಕ ಶಿಕ್ಷಣ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಆಂಗ್ಲಾಭಾಷಾ ಶಿಕ್ಷಕರ ಹುದ್ದೆಗೆ ಬಿ.ಎ, ಬಿ.ಎಡ್, ಎಂ.ಎ, ಬಿ.ಎಡ್ ಮೇಜರ್ ಇಂಗ್ಲೀಷ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ಬಿ.ಪಿಎಡ್, ಎಂಪಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ದೈಹಿಕ ಶಿಕ್ಷಕ ಹುದ್ದೆಗೆ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ರಂಗಸಂದ್ರ ಇಲ್ಲಿಗೆ ನ.2 ರೊಳಗೆ ಸಲ್ಲಿಸುವಂತೆ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.