ಜಿಲ್ಲೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ : ಸಿದ್ದು ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘದ ಸದಸ್ಯರು

ಮಾಗಡಿ: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದನ್ನು ಬಿಟ್ಟು ಮರಣ ಶಾಸನದಂತಿರುವ ಅದೇಶವನ್ನು ತಕ್ಷಣ ಹಿಂಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ತಾಲೂಕು ಅತಿಥಿ ಉಪನ್ಯಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಶನಿವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಡಿ.ಎಸ್. ರಾಜಣ್ಣ ವಾತನಾಡಿ, ಸೇವಾ ಭದ್ರತೆಗೆ ಒತ್ತಾಯಿಸಿ 40 ವರ್ಷಗಳಿಂದಲೂ ಅತಿಥಿ ಉಪನ್ಯಾಸಕರು ಹೋರಾಟ ಮಾಡಿದ ಪರಿಣಾಮ ಸರ್ಕಾರ ತಜ್ಞ ಸಮಿತಿ ರಚಿಸಿದಾಗ ಆಶಾಭಾವ ಮೂಡಿತ್ತು. ಆದರೆ, ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ಅತಿಥಿ ಉಪನ್ಯಾಸಕರಿಗೆ ಸಿಹಿಗಿಂತ ಕಹಿಯೇ ಹೆಚ್ಚಾಗಿದೆ. ಕೂಡಲೇ ಈ ಆದೇಶವನ್ನು ಹಿಂಪಡೆದು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

ಉಪಾಧ್ಯಕ್ಷೆ ವಿ.ಜಿ.ಆರತಿ ವಾತನಾಡಿ, ಸರ್ಕಾರ ಈಗ ಜಾರಿ ಮಾಡಿರುವ ಆದೇಶವನ್ನು ಹಿಂಪಡೆದು ಪಂಜಾಬ್, ಹರಿಯಾಣ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಲ್ಲಿರುವಂತೆ ಅತಿಥಿ ಉಪನ್ಯಾಸಕರಿಗೆ ಒಳಿತಾಗುವಂತೆ ಸೇವಾ ವಿಲೀನತೆ, ಸೇವಾ ಭದ್ರತೆ ಕೊಡಿಸಲು ಸಿದ್ದರಾಮಯ್ಯ ಮುಂದಾಗಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರವಿದ್ದಾಗ ಅತಿಥಿ ಉಪನ್ಯಾಸಕರ ಅನೇಕ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಲಾಗಿದೆ. ನಿಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಹಾಗೂ ಸದನದಲ್ಲೂ ಚರ್ಚಿಸುತ್ತೇನೆ ಎಂದರು.

ವಾಜಿ ಸಚಿವ ಎಚ್.ಎಂ. ರೇವಣ್ಣ, ಕಾರ್ಯದರ್ಶಿ ಸುರೇಶ್, ಸಂಚಾಲಕಿ ಎಸ್.ಎಂ. ನರ್ಮದಾ, ರಾವೇಂದ್ರ ರಾವ್, ಕೆಂಪರಾಜು, ಉಮೇಶ್, ವಿಜಯ್, ಸುಂದರಮ್ಮ, ಕುವಾರು, ತೇಜಮೂರ್ತಿ ಇತರರು ಇದ್ದರು. R