ಜಿಲ್ಲೆ

ಅತಿಕ್ರಮಣ ತೆರವಿಗೆ ಪುರಸಭೆ ಕ್ರಮ

ಬೈಲಹೊಂಗಲ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಂಬೇಡ್ಕರ್​ ಉದ್ಯಾನವರೆಗಿನ ಬಜಾರ್​ ರಸ್ತೆ ಇಕ್ಕಟ್ಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ಪುರಸಭೆ ಅ-ಧಿಕಾರಿಗಳು ಗಮನಿಸಿ ರಸ್ತೆ ಬದಿ ಅಂಗಡಿಗಳ ಮಾಲೀಕರು ಪುಟಪಾತ್​, ಚರಂಡಿ ಮೀರಿ ಅತಿಕ್ರಮಣ ತೆರವುಗೊಳಿಸಲು ಮುಂದಾಗಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಇಂಜನಿಯರ್​ ಗೌರಿಶಂಕರ, ಸ್ವಚ್ಛತಾ ವಿಭಾಗದ ಅಧಿಕಾರಿ ಸುರೇಶ ಪಾಟೀಲ ಮತ್ತು ಸಿಬ್ಬಂದಿ ಪೊಲೀಸ್​ ಸಹಾಯದಿಂದ ಶನಿವಾರ ಬೆಳಗ್ಗೆ ರಸ್ತೆ ಅಗಲೀಕರಣ ಕಾರ್ಯಾಚರಣೆ ಕೆಗೊಂಡು ಸಂಗೊಳ್ಳಿ ರಾಯಣ್ಣ ವತ್ತದ ಅಂಗಡಿಗಳ ಅತಿಕ್ರಮಣ ತೆರವುಗೊಳಿಸಲು ಮುಂದಾಗುತ್ತಿದ್ದಂತೆ ಕೆಲ ಅಂಗಡಿಕಾರರು ಸ್ವಯಂಪ್ರೇರಣೆಯಿಂದ ತೆರವಿಗೆ ಮುಂದಾಗಿದ್ದಾರೆ. ಈಗಾಗಲೇ ಅವರಿಗೆ ನೋಟಿಸ್​ ಸಹ ನೀಡಲಾಗಿತ್ತು ಎಂದು ಮುಖ್ಯಾಧಿಕಾರಿ ವೀರೇಶ ಹಸಬಿ ಹೇಳಿದರು.