ಜಿಲ್ಲೆ

ಅಣ್ಣೂರು ಮಂಚಮ್ಮದೇವಿ ಕರಗ ಪ್ರತಿಷ್ಠಾಪನೆ

ಕೆ.ಎಂ.ದೊಡ್ಡಿ : ಸಮೀಪದ ಅಣ್ಣೂರು ಗ್ರಾಮದ ಶ್ರೀ ಮಂಚಮ್ಮದೇವಿ ಕರಗ ಪ್ರತಿಷ್ಠಾಪನೆ ನ. 25 ಮತ್ತು 26 ರಂದು ಆಯೋಜನೆಗೊಂಡಿದೆ. 25ರ ಸಂಜೆ 6ಕ್ಕೆ ಗಂಗಾ ಪೂಜೆ, ವೀರಗಾಸೆಯ ಸಮೇತ ಗ್ರಾಮ ಪ್ರದಕ್ಷಿಣೆ, ಗಣಪತಿ ಹೋಮ, ಪುಣ್ಯ ಪಂಚಗವ್ಯ, ಅಂಕುರರ್ಪಣೆ, ವಾಸ್ತುಹೋಮ, ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಜರುಗಲಿದೆ. 26 ರ ಬೆಳಗ್ಗೆ 6ಕ್ಕೆ ದೇವಿಗೆ ಪ್ರತಿಷ್ಠಾಪನೆ ಮತ್ತು ಪ್ರಧಾನ ಕಳಸ ಆರಾಧನೆ, ಗಣಪತಿ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಲಿದೆ. ಬೆಳಗ್ಗೆ 10ಕ್ಕೆ ಗ್ರಾಮದ ಪ್ರಮುಖ ದೇವರುಗಳಾದ ಶ್ರೀ ವೆಂಕಟೇಶ್ವರ (ತಿಮ್ಮಪ್ಪ), ಮಹಾಕಾಳಮ್ಮ, ಮಾರಮ್ಮ, ಅಮೃತೇಶ್ವರ, ಸಿದ್ದೇಶ್ವರ, ಹಟ್ಟಿಮಾರಮ್ಮ ದೇವರುಗಳ ಸಮ್ಮುಖ ಗಂಗಾಪೂಜೆ, ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಮಂಚಮ್ಮ ದೇವಿ ಕುಲದವರು, ಆಲದಹಳ್ಳಿ, ಹಾರೋಕೊಪ್ಪ, ಬನ್ನಹಳ್ಳಿ, ಅರೆಕಲ್‌ದೊಡ್ಡಿ ಕೂಳಗೆರೆ, ಕಂಚನಹಳ್ಳಿ, ಕಾಡ ಅಂಕನಹಳ್ಳಿ, ಸೋಗಾಲ್‌ಪಾಳ್ಯ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಗ್ರಾಮದ ನಾಡಗೌಡ ಎ.ಎಸ್. ರಾಜೀವ ತಿಳಿಸಿದ್ದಾರೆ.