ಜಿಲ್ಲೆ

ಅಣ್ಣಾಸಾಹೇಬರ ಜೀವನ ಸಮಾಜಕ್ಕೆ ಪ್ರೇರಣೆ

ನಿಪ್ಪಾಣಿ: ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಸಂಘರ್ಷದ ಜೀವನ ಅನೇಕ ಏರಿಳಿತಗಳಿಂದ ಕೂಡಿದೆ. ಯಶಸ್ಸು-ಅಪಯಶಸ್ಸು ಬಗ್ಗೆ ಚಿಂತೆ ಮಾಡದೆ ಅವರು ಕೇವಲ ಸಮಾಜಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಅವರ ಕಾರ್ಯ ಅನೇಕರಿಗೆ ಪ್ರೇರಣೆ ಮತ್ತು ಆದರ್ಶ ಎಂದು ನಿಡಸೋಸಿ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಶ್ಲಾöಸಿದರು.

ನಗರದ ಮ್ಯಾಗ್ನಂ ಮಲ್ಟಿಪ್ಲೆಕ್ಸ್ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜೀವನ ಕುರಿತ 'ರಿಫಾರ್ಮರ್' ಕಿರು ಚಿತ್ರ ಬಿಡುಗಡೆ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜೊಲ್ಲೆ ದಂಪತಿಯ ಪ್ರತಿಯೊಂದು ಕಾರ್ಯ ಸಮಾಜಕ್ಕೆ ದಾರಿದೀಪವಾಗುತ್ತಿವೆ. ಅವರು ಸ್ಥಾಪಿಸಿದ ಸಂಸ್ಥೆಗಳು ದಿನನಿತ್ಯ ಪ್ರಗತಿಯೊಂದಿಗೆ ವಿಸ್ತಾರವಾಗುತ್ತಿವೆ. ಅಧಿಕಾರ ಇರಲಿ ಬಿಡಲಿ ಸಮಾಜಮುಖಿ ಕಾರ್ಯವನ್ನು ಅವರು ಮುಂದುವರಿಸಿದ್ದು ಆದರ್ಶವಾಗಿದೆ. ಇಂತಹ ಮಹಾನ್ ನಾಯಕನ ಕುರಿತು ಬಿಡುಗಡೆಯಾಗುತ್ತಿರುವ ಸಾಕ್ಷ್ಯ ಚಿತ್ರ ಮುಂದಿನ ಪೀಳಿಗೆಗೆ ಪ್ರೇರಣೆ ನೀಡಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅಣ್ಣಾಸಾಹೇಬ ಜೊಲ್ಲೆ ಅವರ ಜೀವನ ಪೂರ್ತಿ ಸಂಘರ್ಷದಿಂದ ಕೂಡಿದೆ. ೧೮ನೇ ವಯಸ್ಸಿನಲ್ಲಿಯೇ ಒಂದೊಂದು ಕಷ್ಟಗಳು ಎದುರಾದವು. ಅವರ ತಂದೆ-ತಾಯಿ ನೀಡಿದ ಸಂಸ್ಕಾರದಿಂದ ಅವರು ಇಂದು ಇಷ್ಟೊಂದು ಪ್ರಗತಿ ಸ್ಥಾಪಿಸಿದ್ದಾರೆ. ಅವರ ಸಂಘರ್ಷಮಯ ಜೀವನದ ಕಿರು ಚಿತ್ರ ಎಲ್ಲರಿಗೂ ಸ್ಫೂರ್ತಿ ತುಂಬುವಂತಾಗಿದೆ ಎಂದರು. ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡಾ ಪಾಟೀಲ, ಸಂಜಯ ಅಡಕೆ, ಸಂಜಯ ಪ್ರಭು ಮಾತನಾಡಿದರು.

ನಾರಾಯಣ ಗೋರೆ, ಸಾಗರ ಸುವರ್ಣ, ಸಂಜಯ ಪ್ರಭು ಅವರಿಗೆ ಸತ್ಕರಿಸಲಾಯಿತು. ಪ್ರಾಣಲಿಂಗ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ, ಸ್ಥಳೀಯ ನಗರಸಭೆ ಅಧ್ಯಕ್ಷೆ ಸೋನಲ ಕೋಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಜಸರಾಜ ಗಿರೆ, ವೀರನಗೌಡ ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲ್ಗೋಡ, ಹಿರಾಶುಗರ್ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಸತೀಶ ಅಪ್ಪಾಜಿಗೋಳ ಇತರರು ಇದ್ದರು. ಜೊಲ್ಲೆ ಗ್ರುಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಪಾಟೀಲ ನಿರೂಪಿದರು. ವಿಜಯ ರಾವುತ ವಂದಿಸಿದರು.