ಜಿಲ್ಲೆ

ಅಣ್ಣಮ್ಮ ದೇವಿ ಅಲಂಕಾರದಲ್ಲಿ ಬರಗೇರಮ್ಮ

ಚಿತ್ರದುರ್ಗ: ನಗರದೇವತೆ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿ ದೇಗುಲದಲ್ಲಿ ನಡೆದ ಕಾರ್ತಿಕೋತ್ಸವದಲ್ಲೂ ನೆರೆದಿದ್ದವರು ಭಕ್ತಿಯ ಪರಕಾಷ್ಠೆಯಲ್ಲಿ ಮಿಂದೆದ್ದರು. ಮಹೋತ್ಸವ ಅಂಗವಾಗಿ ಬೆಂಗಳೂರಿನ ನಗರದೇವತೆ ಅಣ್ಣಮ್ಮ ದೇವಿ ಮಾದರಿಯಲ್ಲಿ ವಿಶೇಷ ಹೂವಿನ ಅಲಂಕಾರ ಸೇವೆ ನೆರವೇರಿತು.

ಆವರಣದಲ್ಲಿ ಬಿಡಿಸಿದ್ದ ದೇವಿ, ಸಿಂಹ ರೂಪದ ರಂಗೋಲಿ ಸುತ್ತಲೂ ಸಾವಿರಾರು ದೀಪ ಹಚ್ಚಿ ಸಂಭ್ರಮಿಸಿದರು. ಮಹಾಮಂಗಳಾರತಿ ಪಡೆದ ನಂತರ ಸಾವಿರಾರು ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.