- ಕೊಡಗು : ವಿರಾಜಪೇಟೆ ಸಮೀಪದ ಆರ್ಜೀ ಗ್ರಾಮದ ಕಾಳಮಂಡ ಸಂತೋಷ್ ಮತ್ತು ಲತಾ ದಂಪತಿ ಪುತ್ರಿ ಕ್ರಿಷ್ಮಾ ಕಾವೇರಮ್ಮ ಎನ್.ಸಿ.ಸಿ ರಾಷ್ಟ್ರಮಟ್ಟದ ಅಡ್ವೆಂಚರ್ ಕ್ಯಾಂಪ್‌ನಲ್ಲಿ ಸಾಧನೆ ಮಾಡಿದ್ದಾರೆ.
ಉತ್ತರಕಾಶಿಯಲ್ಲಿ ಜೂ.20 ರಂದು ಜರುಗಿದ ಎನ್.ಸಿ.ಸಿ ರಾಷ್ಟ್ರಮಟ್ಟದ ಅಡ್ವೆಂಚರ್ ಕ್ಯಾಂಪಿನಲ್ಲಿ ಭಾಗವಹಿಸಿ, ವಾಲ್ ಕ್ಲೈಂಬಿಂಗ್‌ನಲ್ಲಿ ಬೆಳ್ಳಿ ಪದಕ, ಕ್ರಾಸ್ ಕಂಟ್ರೀ ರೇಸಿನಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಮೂಲತಃ ಕೊಡಗಿನವರಾದ ಕ್ರಿಷ್ಮಾ ಕಾವೇರಮ್ಮ ವಿರಾಜಪೇಟೆಯ ಸೇಂಟ್ ಆ್ಯನ್ಸ್ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ, ಬಳಿಕ ಗೋಣಿಕೊಪ್ಪದ ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ ಪ್ರಸ್ತುತ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ ಓದುತ್ತಿದ್ದಾರೆ.