ಕಲಾದಗಿ : ಒಳ್ಳೆಯ ಹಿರಿತನ ಹಾಗೂ ದೈವಿ ಭಕ್ತಿಗೆ ಈ ಭಾಗದಲ್ಲಿಯೇ ಚಿಕ್ಕಸಂಶಿ ಗ್ರಾಮ ಮಾದರಿಯಾಗಿದ್ದು, ಈ ರೀತಿಯ ಮನಸ್ಥಿತಿಯ ಗ್ರಾಮಸ್ಥರಿಂದ ಸಮಾಜದ, ನಾಡಿನ ಅಭಿವೃದ್ಧಿ ಸಾಧ್ಯ ಎಂದು ಶಾಸಕ, ಹಟ್ಟಿ ಚಿನ್ನದ ಗಣಿ ನಿ., ಅಧ್ಯ ಜೆ.ಟಿ. ಪಾಟೀಲ ಹೇಳಿದರು.ಸಮೀಪದ ಚಿಕ್ಕಸಂಶಿಯ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಸೋಮವಾರ ಧಾರ್ಮಿಕ ದತ್ತಿ ಇಲಾಖೆ ಅನುದಾನದಡಿಯಲ್ಲಿ 20 ಲ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮೇಲ್ಛಾವಣಿ ಹಾಗೂ ಅಡುಗೆ ಕೋಣೆ ಉದ್ಘಾಟಿಸಿ ಅವರು ಮಾತನಾಡಿ. ಮುಳುಗಡೆಯಾಗುತ್ತಿರುವ ಚಿಕ್ಕಸಂಶಿ ಗ್ರಾಮ ಸೇರಿ ಮತೇತ್ರದ ಗಿರಿಸಾಗರ, ಚಿಕ್ಕಾಲಗುಂಡಿ ಗ್ರಾಮಗಳ ಮರು ಸಮೀೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪಂಚ ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಬದುಕನ್ನು ನೆಮ್ಮದಿಯಾಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಭೂಮಿ ಕಳೆದುಕೊಳ್ಳುತ್ತಿರುವ ಯುಕೆಪಿಯ ಸಂತ್ರಸ್ತ ರೈತರಿಗೆ ನಮ್ಮೆಲ್ಲರ ಮನವಿಯಂತೆ ಸಹಾ ಉತ್ತಮ ಬೆಲೆ ೂಷಣೆ ಮಾಡಿರುವ ಮೂಲಕ ಸರ್ಕಾರ ಜನಪರ ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ ಎಂದು ಹೇಳಿದರು.ಕಲಾದಗಿ ಬ್ಲಾಕ್ ಕಾಂಗ್ರೆಸ್ ಅಧ್ಯ ಡಾ. ಬಸವರಾಜ ಸಂಶಿ, ಮುಖಂಡರಾದ ಕೆ.ಟಿ. ಪಾಟೀಲ, ಪಾಂಡು ಪೊಲೀಸ್, ಎ.ಎಲ್. ನಾವಲಗಿ, ತಿಮ್ಮಣ್ಣಾ ಸಾಲಾಪುರ, ನಾರಾಯಣ ಹಾದಿಮನಿ, ಆನಂದ ಹೊನ್ನಪ್ಪಗೋಳ, ಮಲ್ಲಿಕಾರ್ಜುನ ಪತ್ತಾರ, ಕೆ. ಕೃಷ್ಣಪ್ಪನವರ, ಕೃಷ್ಣಾ ಪತ್ತಾರ, ಮಾಲನಗೌಡ ಪಾಟೀಲ, ಎಲ್.ಟಿ. ಪಾಟೀಲ, ಗೋಪಾಲ ಶೇಗುಣಿಸಿ, ಶ್ರೀಕಾಂತ ಜೈನಾಪುರ ಇದ್ದರು.
ಚಿಕ್ಕಸಂಶಿಯಲ್ಲಿ ಮಾರುತೇಶ್ವರ ದೇವಾಲಯದ ಮೇಲ್ಛಾವಣಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು. ಮುಖಂಡರಾದ ಕೆ.ಟಿ. ಪಾಟೀಲ, ಪಾಂಡು ಪೊಲೀಸ್ ಇದ್ದರು.