ಜಿಲ್ಲೆ

ಅಡಕೆ ಕದ್ದ ದಂಪತಿ ಬಂಧನ

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮದ ತೋಟದ 65 ರಿಂದ 70 ಅಡಕೆ ಮರಗಳಿಂದ ಕೊನೆಗಳನ್ನು ಕದ್ದೊಯ್ದಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕ್ಷಿಂಟಾಲ್ ಅಡಕೆ, ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಡೂರು ಮಹಮ್ಮದ್ ಸಾದಿಕ್ (39), ಸಲ್ಮಾ (39) ಬಂಧಿತ ದಂಪತಿ. ಇವರು ಲಕ್ಕಿನಕೊಪ್ಪದಲ್ಲಿ ವಾಸವಾಗಿದ್ದಾರೆ. ತೋಟದಲ್ಲೇ ಅಡಕೆಕೊನೆ ಕೊಯ್ದು ಕದ್ದೊಯ್ದಿರುವುದಾಗಿ ಮಾಲೀಕರು ದೂರು ನೀಡಿದ್ದರು.

ಹಲವು ಮಾರ್ಗಗಳ ಸಿಸಿ ಕ್ಯಾಮರಾಗಳಲ್ಲಿನ ಚಲವಲನಗಳನ್ನು ಆಧರಿಸಿ ಲಕ್ಕಿನಕೊಪ್ಪ ಸರ್ಕಲ್ ಬಳಿ ಮಹಮ್ಮದ್ ಸಾದಿಕ್‌ನನ್ನು ಬಂಧಿಸಿದರು. ವಿಚಾರಣೆಗೊಳಪಡಿಸಿದಾಗ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಕೆ ಕಳವು ಮಾಡಿರುವುದಾಗಿ ಮಾಹಿತಿ ನೀಡಿದ. ನಂತರ ಕಳವಿನಲ್ಲಿ ಭಾಗಿಯಾಗಿದ್ದ ಮಹಮ್ಮದ್ ಸಾದಿಕ್‌ನ ಪತ್ನಿ ಸಲ್ಮಾಳನ್ನು ಮನೆಯಲ್ಲಿ ಬಂಧಿಸಿದರು.

ಪಿಎಸ್‌ಐ ಬಿ.ಎಸ್.ನಿರಂಜನ್‌ಗೌಡ, ಕ್ರೈಂ ಪಿಎಸ್‌ಐ ಜ್ಯೋತಿ, ಸಿಬ್ಬಂದಿ ಪರಮೇಶ್, ಪಿ.ಎ.ಬಿನು, ಮಧು, ಅಮಿತ್ ಚೌಗಲೆ, ದೇವರಾಜ್, ಕೌಶಿಕ್, ನವೀನ್‌ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.