ಚಾಮರಾಜನಗರ: ತಾಲೂಕಿನ ಅಟ್ಟಗೂಳಿಪುರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವ ಟೋಲ್ ಗೇಟ್ ಶುಕ್ರವಾರದಿಂದ ಪ್ರಾರಂಭವಾಗಿದ್ದು, ಸ್ಥಳೀಯರಿಂದ ಶುಲ್ಕ ವಸೂಲಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ಗೆ ಚಾಮರಾಜನಗರ ಮೂಲಕ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-948 ರಲ್ಲಿ ಸುವರ್ಣಾವತಿ ಜಲಾಶಯದ ಸಮೀಪ ನಿರ್ಮಾಣ ಮಾಡಿದ್ದ ಟೋಲ್ ್ಲಾಜಾ ಶುಕ್ರವಾರದಿಂದ ಕಾರ್ಯಾರಂಭ ಮಾಡಿದೆ. ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಕಾರು, ಬಸ್, ಲಾರಿ ಮತ್ತು ಇನ್ನಿತರೆ ವಾಹನಗಳು ನಿಗದಿತ ಶುಲ್ಕ ಕಟ್ಟಿ ಸಂಚಾರ ಮಾಡಬೇಕಿದೆ. ಅದರಂತೆ ಶುಲ್ಕ ಪಾವತಿಸುವ ಮೂಲಕ ವಾಹನಗಳು ಸಂಚಾರ ಮಾಡಿದವು. ವಿವಿಧ ವಾಹನಗಳಿಗೆ ಸಿಬ್ಬಂದಿಗಳು ಾಸ್ಟ್‌ಟ್ಯಾಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಈ ಹಿಂದೆ ಟೋಲ್ ್ಲಾಜಾ ಹರದನಹಳ್ಳಿ ಸಮೀಪ ನಿರ್ಮಾಣ ಮಾಡಲಾಗಿತ್ತು. ಯೋಜನೆ ಬದಲಾದ ಹಿನ್ನೆಲೆಯಲ್ಲಿ ಸುವರ್ಣಾವತಿ ಜಲಾಶಯದ ಸಮೀಪಕ್ಕೆ ವರ್ಗಾಹಿಸಲಾಯಿತು. ಟೋಲ್ ಗೇಟ್ ಪ್ರಾರಂಭವಾದ ದಿನವೇ ಸ್ಥಳಿಯರಿಂದ ಶುಲ್ಕ ವಸೂಲಿ ಮಾಡುವುದನ್ನು ವಿರೋಧಿಸಿ ಪ್ರತಿಭಟನೆಯೂ ನಡೆದಿದೆ.
ಸ್ಥಳೀಯರಿಂದ ಪ್ರತಿಭಟನೆ:
ಸುವರ್ಣಾವತಿ ಜಲಾಶಯದ ಸಮೀಪದಲ್ಲಿರುವ ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಂದ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ಗೂಡ್ಸ್ ಆಟೋ ಮಾಲೀಕರು, ಚಾಲಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿಬಸವನಪುರ ರಾಜಶೇಖರ್ ಮಾತನಾಡಿ, ಸ್ಥಳೀಯ ರೈತರು ಬೆಳೆದ ತರಕಾರಿ, ದವಸ,ಧಾನ್ಯಗಳನ್ನು ಗೂಡ್ಸ್ ಆಟೋ ಚಾಲಕರು ಮನೆಗೆ ಸಾಗಿಸುವ, ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯವಾಗಿ ಓಡಾಡುವ ಆಟೋಗಳಿಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಶುಲ್ಕ ಕಟ್ಟದಿದ್ದರೆ ಆಟೋ ಚಾಲಕರೊಂದಿಗೆ ಟೋಲ್ ಸಿಬ್ಬಂದಿಗಳು ಗೂಂಡಾವರ್ತನೆ ತೋರುತ್ತಿದ್ದಾರೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಕೆಸ್ತೂರು ಮರಪ್ಪ, ಕನ್ನಹಳ್ಳಿ ಸೋಮಣ್ಣ, ಅಟೋ ಚಾಲಕರಾದ ವಿನೋದ್ ಕುಮಾರ್, ಲೋಹಿತ್, ರವಿ, ಜಗದೀಶ್, ಚಂದನ್, ಮಹೇಶ್, ಸಿದ್ದು, ಮಹೇಂದ್ರ, ರಮಿಜ್ ರಮೇಶ್, ವಿಶಾಲ್, ಮಹೇಶ್, ವಿಕ್ರಂ, ಆಕಾಶ್, ಲಿಂಗಪ್ಪ, ಸಿದ್ದರಾಜು ಇತರರು ಭಾಗವಹಿಸಿದ್ದರು.