ಭಾಲ್ಕಿ: ಕತ್ತಲೆ ಕಳೆದು ಬೆಳಕಿನೆಡೆಗೆ ಸಾಗುವ ದೀಪಾವಳಿ ದಿನದಂದೇ, ಬಾಲಯೇಸುವಿನ ಪುಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಎಲ್ಲರೂ ನಮ್ಮಲ್ಲಿನ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಾಲಯೇಸು ಚರ್ಚ್ನಲ್ಲಿ ಭಾನುವಾರ ಏರ್ಪಡಿಸಿದ್ದ ೪೦ನೇ ವರ್ಷದ ಮಾಣಿಕ್ಯ ಮಹೋತ್ಸವದಲ್ಲಿ ಮಾತನಾಡಿ, ಬಡವರ ನೆರವಿಗೆ ಕ್ರಿಶ್ಚಿಯನ್ ಮಶಿನರಿಗಳು ನಿಲ್ಲುತ್ತಿವೆ ಎಂದರು.
ಎಲ್ಲರೂ ಪ್ರೀತಿಯಿಂದ ಇರಬೇಕು ಎನ್ನುವುದು ಯೇಸುವಿನ ಉದ್ದೇಶ. ಯೇಸು ಕ್ರಿಸ್ತನು ತನ್ನನ್ನು ಶಿಲುಬೆಗೇರಿಸಿದವರನ್ನೇ ಕ್ಷಮಿಸಿದ್ದ. ಆದರೆ ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ಯುದ್ಧ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಧರ್ಮಾಧಿಕಾರಿ ರಾಬರ್ಟ ಮೈಕಲ್ ಮಿರಾಂಡ ಮಾತನಾಡಿದರು. ಪ್ರಮುಖರಾದ ರೋಕಿ ಡಿಸೋಜಾ, ಕ್ಲೇರಿ ಡಿಸೋಜಾ, ಮಾರ್ಕ ಡಿಸೋಜಾ, ಶ್ರೀನಿವಾಸ ಬೇಂದ್ರೆ, ವಿಲಾಸ ಬಕ್ಕಾ, ಹಣಮಂತರಾವ ಚವ್ಹಾಣ್, ಸಂಜಯ ಜಾಗೀರದಾರ, ಸಂತೋಷ ಡಾಯಿಸ್, ಶ್ರೀನಿವಾಸ ಬೇಂದ್ರೆ, ಮಾಣಿಕ ರೇಷ್ಮೆ, ಓಂಕಾರ ಮಜಕೂರಿ ಇತರರಿದ್ದರು.