ತರೀಕೆರೆ: ಅಜ್ಜಂಪುರದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯ ಕಟ್ಟಡವನ್ನು ಜಿಲ್ಲಾ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗ್ಗಡೆ ಮಂಗಳವಾರ ಪರಿಶೀಲನೆ ನಡೆಸಿದರು.
ಅಜ್ಜಂಪುರ ನೂತನ ತಾಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಪಟ್ಟಣದಲ್ಲಿ ನ್ಯಾಯಾಲಯ ಸಂಕೀರ್ಣ ಸ್ಥಾಪಿಸಲಾಗಿದೆ. ಅಜ್ಜಂಪುರ ತಾಲೂಕಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದ್ದು, ಜೂ.12ರಂದು ಕಾರ್ಯಾರಂಭ ಮಾಡಲಿರುವ ಜೆಎಂಎ್ಸಿ ನ್ಯಾಯಾಲಯದ ಮೂಲಕ ಹಂತ ಹಂತವಾಗಿ ಇತ್ಯರ್ಥಗೊಳಿಸಲಾಗುವುದು ಎಂದರು.
ನೂತನ ನ್ಯಾಯಾಲಯದಲ್ಲಿ ಪ್ರತಿ ಗುರುವಾರ ಮತ್ತು ಶುಕ್ರವಾರ ಎರಡು ದಿನ ಕಲಾಪ ನಡೆಯಲಿದ್ದು, ಯಾವುದೇ ತಾಂತ್ರಿಕ ದೋಷಗಳು ಬರದಂತೆ ವ್ಯವಸ್ಥೆ ಮಾಡಬೇಕು ಎಂದು ತರೀಕೆರೆ ಜೆಎಂಎ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ವೈದ್ಯ ಶ್ರೀಕಾಂತ್ ಅವರಿಗೆ ಸೂಚಿಸಿದರು.
ಅಜ್ಜಂಪುರ ವಕೀಲರ ಸಂಘದ ಅಧ್ಯಕ್ಷ ಟಿ.ಜೆ.ಅವಿನಾಶ್, ಕಾರ್ಯದರ್ಶಿ ನಿಂಗಣ್ಣ, ತರೀಕೆರೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ವಿ.ದಿನೇಶ್‌ಕುಮಾರ್, ಹಿರಿಯ ವಕೀಲ ಎಸ್.ಸುರೇಶ್‌ಚಂದ್ರ, ಪಪಂ ಮುಖ್ಯಾಧಿಕಾರಿ ಟಿ.ಜಿ.ರಮೇಶ್ ಇತರರಿದ್ದರು.