ಶಹಾಪುರ: ಮಂಗಳವಾರ ಹಠಾತ್ತನೆ ಹೃದಯಘಾತದಿಂದ ನಿಧನ ಹೊಂದಿದ ಕೆಪಿಸಿಸಿ ಉಪಾಧ್ಯP್ಷÀ ಮರಿಗೌಡ ಹುಲ್ಕಲï ಅಂತ್ಯಕ್ರಿಯೆ ಬುಧವಾರ ಅವರ ಸ್ವಗ್ರಾಮ ಹುಲ್ಕಲïನಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ನೆರವೇರಿತು.
ಸಚಿವ ಶರಣಬಸಪ್ಪ ದರ್ಶನಾಪುರ ಸೇರಿ ಹಲವು ಗಣ್ಯರು ಮರಿಗೌಡ ಹುಲ್ಕಲ್ ಅವರ ಅಂತಿಮ ದರ್ಶನ ಪಡೆದರು. ಮಂಗಳವಾರ ರಾತ್ರಿಯಿಂದಲೆ ಅಂತಿಮ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕುರುಬ ಸಮುದಾಯದ ಮುಖಂಡರಾದ ಹುಲ್ಕಲï ಅವರು, ಶುದ್ಧ ರಾಜಕಾರಣಿಯಾಗಿದ್ದರು. ಇತರ ಎಲ್ಲ ಸಮುದಾಯದ ಮುಖಂಡರ ಜತೆ ಒಳ್ಳೆಯ ಸಂಪರ್ಕ ಕೂಡ ಹೊಂದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಲ್ಲಿ ಇವರು ಕೂಡ ಒಬ್ಬರಾಗಿದ್ದರು. ಇತ್ತೀಚಿನ ರಾಜಕಾರಣ ನಮಗೆ ಒಗ್ಗುವುದಿಲ್ಲ ಎಂದು ಹೇಳುತ್ತಿದ್ದ ಅವರಿಗೆ ವಿಧಾನ ಪರಿಷತ್ ಸದಸ್ಯರಾಗಬೇಕು ಎನ್ನುವ ಕನಸು ಕೂಡ ನನಸಾಗಲಿಲ್ಲ. 35 ವರ್ಷಗಳ ಅವರ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಭ್ರಷ್ಟಾಚಾರ ಎನ್ನುವುದು ಅವರ ಬಳಿ ಸುಳಿಯಲೇ ಇಲ್ಲ. ಇಂತಹ ನಿಷ್ಕಳಂಕ ರಾಜಕಾರಣಿ ಇಷ್ಟು ಬೇಗ ಅಗಲಬಾರದಿತ್ತು ಎಂದು ಅವರ ಅಭಿಮಾನಿ ಬಳಗ ಹೇಳುತ್ತಿತ್ತು.
ಸ್ವಗ್ರಾಮ ಹುಲ್ಕಲ್‍ನ ಅವರ ಸ್ವಂತ ಹೊಲದಲ್ಲಿ ಕುರುಬ ಸಮುದಾಯದ ವಿಧಿ ವಿಧಾನದಂತೆ ಅಪಾರ ಜನ ಸಮೂಹದೊಂದಿಗೆ ಅಂತ್ಯಸಂಸ್ಕಾರ ನೆರವೇರಿತು. ತಿಂಥಣಿ ಬ್ರಿಜ್‍ನ ಕನಕ ಗುರು ಪೀಠದ ಶ್ರೀ ಬೀರಲಿಂಗ ದೇವರು ಉಪಸ್ಥಿತರಿದ್ದರು.