ಜಿಲ್ಲೆ

ಅಗ್ರಹಾರ ಗ್ರಾಪಂ ಅಧ್ಯಕ್ಷ ಎ.ಆರ್.ಕೇಶವಪ್ರಸಾದ್

ಅರಕಲಗೂಡು ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಎ.ಆರ್.ಕೇಶವಪ್ರಸಾದ್, ಶೋಭಾ ಗುರುವಾರ ಆಯ್ಕೆಯಾದರು. ಚುನಾವಣಾಧಿಕಾರಿ ರಮೇಶ್ ಕುಮಾರ್, ಮೋಹನ್‌ಕುಮಾರ್ ಇದ್ದರು.

ಎಂ.ರವಿ

ಅರಕಲಗೂಡು: ತಾಲೂಕಿನ ಅಗ್ರಹಾರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಎ.ಆರ್.ಕೇಶವಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಗುರುವಾರ ಆಯ್ಕೆಯಾದರು.


ಚುನಾವಣೆ ಪ್ರಕ್ರಿಯೆಯಲ್ಲಿ ಪಂಚಾಯಿತಿಯ ಒಟ್ಟು 10 ಸದಸ್ಯರ ಪೈಕಿ ಎಲ್ಲರೂ ಹಾಜರಾಗಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎ.ಆರ್. ಕೇಶವಪ್ರಸಾದ್ ಅವರಿಗೆ 7 ಮತ್ತು ಪ್ರತಿಸ್ಪರ್ಧಿ ಪ್ರತಿಸ್ಪರ್ಧಿ ಜ್ಞಾನೇಶ್ವರ್ ಅವರಿಗೆ 3 ಮತ ದೊರೆಯಿತು. ಹಿಂದುಳಿದ ವರ್ಗ ಅ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶೋಭಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.

ಸಹಾಯಕ ಕೃಷಿ ನಿರ್ದೇಶಕ ರಮೇಶ್‌ಕುಮಾರ್ ಚುನಾವಣಾ ಕಾರ್ಯನಿರ್ವಹಿಸಿದರು. ಪಿಡಿಒ ಮೋಹನ್‌ಕುಮಾರ್ ಇದ್ದರು.