ವಿಜಯಪುರ: ಸ್ಪಂದನ ಸೇವಾ ಸಂಸ್ಥೆ ವಿಜಯಪುರ ಹಾಗೂ ಟಿಸಿಐ ಫೌಂಡೇಶನ್ ವತಿಯಿಂದ ವಿಜಯಪುರದ ಟಕ್ಕೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ
ಲಸಿಕಾ ಮೇಳ ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಮಾರ್ಗಸೂಚಿಯಂತೆ ಜನವರಿ 16, 2021 ರಿಂದ ರಾಜ್ಯದಲ್ಲಿ ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು ಹಂತ ಹಂತವಾಗಿ ಲಸಿಕಾ 'ಹರ್ ಘರ್ ದಸ್ತಕ್' ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದ್ದು ಯು- ಎಸೈಡಿ ಎಮ್-ರೈಟ್ ಯೋಜನೆ ಅಡಿಯಲ್ಲಿ ಜಾನ್ ಸ್ನೋ ಇಂಡಿಯಾ ಅವರ ಮೇಲ್ವಿಚಾರಣೆಯಲ್ಲಿ ಜಿಲ್ಲೆಯಲ್ಲಿ ಟಿಸಿಐ ಫೌಂಡೇಶನ್ ಕಾರ್ಯನಿವಾಹಿಸುತ್ತಿದೆ. ಸ್ಪಂದನ ಸೇವಾ ಸಂಸ್ಥೆ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ವಿಜಯಪುರ ಆವರಣದಲ್ಲಿ ಆಯೋಜಿಸಿದ್ದ ಲಸಿಕಾ ಮೇಳದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸೇರಿ 66ಕ್ಕೂ ಜನ್ರಿಗೆ ಕೋವಿಡ್ 19 ಬೂಸ್ಟರ್ ಡೋಸ್ ನೀಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯಾದ ರಂಗನಾಥ್ ರಾಠೋಡ, ಪ್ರಕಾಶ ಪವಾರ,ನಾಗನಾಥ, ವ್ಹಿ ಬಿ ಢವಳೆ, ಎಲ್ ಬಿ ಕಾಖಂಡಕಿ, ಗಣೇಶ ಝಳಕಿ, ಮಲ್ಲಿಕಾರ್ಜುನ್ ಕುಂಬಾರ ಸೇರಿದಂತೆ ಇತರರಿದ್ದರು.