ಬಸವೇಶ್ವರ ಆಟದ ಮೈದಾನದಲ್ಲಿ ಅಗ್ನಿ ದುರಂತದ ವಿವಿಧ ತರಹ ಪ್ರಾಥಕ್ಷಿಕತೆಯನ್ನು ತೋರಿಸಲಾಯಿತು. 
ಜಿಲ್ಲೆ

ಅಗ್ನಿ ಸುರಕ್ಷತಾ ಮುನ್ನಚ್ಚರಿಕೆಯ ಅರಿವು ಮುಖ್ಯ

ಬಾಗಲಕೋಟೆ: ಇತ್ತಿಚಿಗೆ ಅಗ್ನಿ ದುರಂತಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ಪ್ರತಿಯೊಬ್ಬರು ಇಂತಹ ಸಂದರ್ಭದಲ್ಲಿ ಅಗ್ನಿ ಸುರಕ್ಷತಾ ಮುನ್ನಚ್ಚರಿಕೆಯ ಅರಿವು ಅಗತ್ಯವಾಗಿದೆ ಎಂದು ಬಿ.ವಿ.ವಿ.ಸಂಘದ ಕಟ್ಟಡಗಳ ವಿಭಾಗದ ಕಾರ್ಯಾಧ್ಯಕ್ಷರಾದ ಮಹೇಶ ಕಕರೆಡ್ಡಿ ಹೇಳಿದರು.

ಅವರು ನಗರದ ಪ್ರತಿಷ್ಥಿತ ಬಿ.ವಿ.ವಿ. ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾ ಅಗ್ನಿ ಶ್ಯಾಮಕ ದಳ ಬಾಗಲಕೋಟೆ ಹಾಗೂ ಬಿ.ವಿ.ವಿ.ಸಂಘದ ಸಹಯೋಗದೊಂದಿಗೆ ಸಂಘದ ಎಲ್ಲ ಅಂಗ ಸಂಸ್ಥೆಗಳ ಸಿಬ್ಬಂದಿಗಳಿಗಾಗಿ ನಡೆದ ಅಗ್ನಿ ಸುರಕ್ಷತಾ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಇತ್ತಿಚಿಗೆ ಅಗ್ನಿ ದುರಂತಗಳು ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ, ಪ್ರತಿಯೊಬ್ಬರು ಇಂತಹ ಸಂzದರ್ಭದಲ್ಲಿ ಜಾಗೃತರಾಗಿ ಅಗ್ನಿ ದುರಂತದಿAದಾಗುವ ಅಪಾರ ಹಾನಿ ತಪ್ಪಿಸಲು ಅಗ್ನಿ ಸುರಕ್ಷತಾ ಮುನ್ನಚ್ಚರಿಕಾ ಕ್ರಮಗಳನ್ನು ಅರಿತುಕೊಳ್ಳುವುದು ಅತ್ಯವಶ್ಯಕ ಜೋತೆಗೆ ಪ್ರತಿಯೊಬ್ಬರ ಇಲಾಖೆಯನ್ನೆ ಅವಲಂಬಿಸದೆ, ಸ್ವತಹ ಅಗ್ನಿಯನ್ನು ಉಪಶಮನಗೊಳಿಸುವ ಜ್ಞಾನವನ್ನು ಹೊಂದಬೇಕಾಗಿದೆ, ಆ ನಿಟ್ಟಿನಲ್ಲಿ ಇಂದು ಬಿ.ವಿ.ವಿ.ಸಂಘದ ಎಲ್ಲ ಅಂಗ ಸಂಸ್ಥೆಗಳ ಸಿಬ್ಬಂದಿಗೆ ಜಿಲ್ಲಾ ಅಗ್ನಿ ಶ್ಯಾಮಕ ದಳ ಬಾಗಲಕೋಟೆ, ಹಾಗೂ ಬಿ.ವಿ.ವಿ.ಸಂಘದ ಸಹಯೋಗದೊಂದಿಗೆ ಆಯೋಜಿಸಿದ ಅಗ್ನಿ ಸುರಕ್ಷತಾ ತರಬೇತಿ ಕಾರ್ಯಾಗಾರ ಅತ್ಯಂತ್ಯ ಮಹತ್ವದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಅಗ್ನಿ ಶಾಮಕ ದಳದ ಜಿಲಾಧಿಕಾರಿಗಳಾದ ಪ್ರಕಾಶ ಪವಾರ ಮಾತನಾಡಿ ಅಗ್ನಿ ದುರಂತದ ಬಗ್ಗೆ ಅರಿವು ಎಲ್ಲರಿಗೂ ಅತ್ಯವಶ್ಯಕವಾಗಿದೆ, ಇಲ್ಲವಾದಲ್ಲಿ ಅಪಾರ ಜೀವಹಾನಿ ಹಾಗೂ ನಷ್ಟ ಸಂಭವಿಸಿಸುತ್ತದೆ, ಮೊದಲಿಗೆ ಮನೆಯ ವಾತಾವರಣದಿಂದ ಹಿಡಿದು ನಾವು ಕಾರ್ಯ ನಿರ್ವಹಿಸುವ ಕಛೇರಿ ಹಾಗೂ ನಮ್ಮ ಪರಿಸರದಲ್ಲಿ ಇಂತಹ ದುರಂತಗಳು ಸಂಭವಿಸದAತೆ ಮುನ್ನಚ್ಚರಿಕೆವಹಿಸುವುದು ಅತ್ಯವಶ್ಯಕವಾಗಿದೆ, ಅದಾಗ್ಯೂ ಇಂತಹ ದುರಂತಗಳು ವಿವಿಧ ಕಾರಣಗಳಿಂದ ಜರುಗಿದಾಗ ಜಾಗೃತಾ ವಿಧಾನದಿಂದಾಗಿ ಉಪಶಮನಗೊಳಿಸುವ ಜ್ಞಾನ ಹೊಂದಬೇಕಾದುದ್ದು ಅನಿವಾರ್ಯ ಆ ನೀಟ್ಟಿನಲ್ಲಿ ಈ ಇಂದು ದಿನ ಅಗ್ನಿ ದುರಂತದ ಉಗಮ ಪ್ರಸಾರ ಹಾಗೂ ಉಪಶಮನಗೊಳಿಸುವ ಹಲವು ಬಗೆಯ ವಿಧಾನಗಳನ್ನು ತಿಳಿಸಿಕೊಡಲು ಸಂಘದ ಸಹಯೋಗದೊಂದಿಗೆ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ, ಎಲ್ಲರೂ ಈ ಕಾರ್ಯಾಗಾರದ ಸದುಪಯೋಗವನ್ನು ಪಡೆದುಕೋಳ್ಳಿ ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಠಾಣಾಧೀಕಾರಿಗಳಾದ ಪರಶುರಾಮ ಲಮಾಣಿ ಮಾತನಾಡಿ ಅಗ್ನಿ ಅವಘಡ ಅದರಿಂದಾದ ಪರಿಣಾಮ ಮುಂತಾದವುಗಳನ್ನ ವಿವಿಧ ದೃಷ್ಟಾಂತಗಳ ಮೂಲಕ ತಿಳಿಸಿಕೋಟ್ಟರು.

ವೇದಿಕೆ ಮೇಲೆ ಸಂಘದ ಆಡಳಿತಾಧೀಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಬೆಳಗಾವಿಯ ಪಿನಿಕ್ಸ್ ಪೈಯರ್ ಸಿಸ್ಟಮ್ ನ ಸತೀಶ ಕುಲಕರ್ಣಿ, ಪದನಿಮಿತ್ಯ ಕಾರ್ಯದರ್ಶಿಗಳಾದ ಡಾ.ಎಸ್.ಎಮ್.ಗಾಂವಕರ, ಡಾ.ಕೆ.ಎಚ್.ಹೋಸುರ, ಪ್ರಾಚಾರ್ಯ ಪ್ರೋ. ಓ.ಬಿ.ಕೋರಿಶೆಟ್ಟಿ ಹಾಗೂ ಡಾ.ಜಗನ್ನಾಥ ಚವ್ಹಾಣ ಸೇರಿದಂತೆ ಅನೇಕರು ಇದ್ದರು.

ಕಾರ್ಯಾಗಾರದಲ್ಲಿ ೨೦೦ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗವಹಿಸಿದ್ದರು, ನಂತರದಲ್ಲಿ ಅಗ್ನಿ ಶ್ಯಾಮಕ ದಳದ ಸಿಬ್ಬಂದಿಯಿಂದ ಬಸವೇಶ್ವರ ಆಟದ ಮೈದಾನದಲ್ಲಿ ಅಗ್ನಿ ದುರಂತದ ವಿವಿಧ ತರಹ ಪ್ರಾಥಕ್ಷಿಕತೆಯನ್ನು ತೋರಿಸಲಾಯಿತು.