ಜಿಲ್ಲೆ

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

Gadag

StartFragment

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಎರಡು ನೂರರ ಅಂಚಿಗೆ ತಲುಪಿದೆ. ಪಟ್ಟಣದಲ್ಲಿಯೇ ಶತಕ ಬಾರಿಸಿದೆ. ಆದಾಗ್ಯೂ ಪಟ್ಟಣದ ಮಾರ್ಕೆಟ್​ನಲ್ಲಿ ಮುಂಜಾಗ್ರತೆ ಕ್ರಮಗಳಿಲ್ಲದೆ ಜನ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬೀಳುವ ದೃಶ್ಯ ಸಾಮಾನ್ಯವಾಗಿದೆ. ಜನರ ಅನುಕೂಲಕ್ಕಾಗಿ ಲಾಕ್​ಡೌನ್ ಸಡಿಲಿಸಿದ್ದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಕರೊನಾ ನಿಗ್ರಹಕ್ಕಾಗಿ ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂಬ ಸರ್ಕಾರದ ಮನವಿ, ಸೂಚನೆಯನ್ನು ಜನ ಧಿಕ್ಕರಿಸುತ್ತಿದೆ ಎಂಬುದಕ್ಕೆ ಪಟ್ಟಣದ ಮಾರ್ಕೆಟ್ ಸಾಕ್ಷಿಯಾಗಿದೆ.

ತಾಲೂಕಿನಲ್ಲಿ ಇದುವರೆಗೂ 186 ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು ಲಕ್ಷ್ಮೇಶ್ವರ ಪಟ್ಟಣದಲ್ಲಿಯೇ 99 ಕೇಸ್​ಗಳು ದೃಢಪಟ್ಟಿವೆ. ಒಟ್ಟು 6 ಜನ ಸೋಂಕಿನಿಂದ ಮೃತಪಟ್ಟಿದ್ದು ಅದರಲ್ಲಿ ಐವರು ಪಟ್ಟಣದವರೇ ಆಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸರ್ಕಾರದ ಆದೇಶದಂತೆ ತರಕಾರಿ ಸಂತೆಯನ್ನು 2 ವಾರದಿಂದ ಹೊರವಲಯದ ಉಮಾ ವಿದ್ಯಾಲಯ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ವ್ಯಾಪಾರಸ್ಥರು ಮತ್ತು ಜನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ನಿಯಮದ ಮೇಲೆ ನಿಗಾವಹಿಸಲಾಗುವುದು. ಜನಸಂದಣಿ ತಡೆಗಟ್ಟಲು ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ಮತ್ತೊಮ್ಮೆ ಸಮಾಲೋಚಿಸಲಾಗುವುದು ಎಂದರು.

EndFragment