ಜಿಲ್ಲೆ

ಅಖಂಡ ಭಾರತದ ಪರವಿದ್ದೇವೆ

Chitradurga - Desk - Pranav Kumar

ಚಿತ್ರದುರ್ಗ: ಅಖಂಡ ಭಾರತದ ಪರ ಕಾಂಗ್ರೆಸ್ಸಿಗರು ಇದ್ದೇವೆ. ಯಾವ ಕಾರಣಕ್ಕೂ ಪ್ರತ್ಯೇಕ ರಾಷ್ಟ್ರದ ಪರವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಬರಗಾಲ ಸಂಬಂಧ ಪರಿಹಾರ ಬಿಡುಗಡೆಗಾಗಿ ಸಿಎಂ, ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವರು ಮನವಿ ಸಲ್ಲಿಸಿದ್ದರೂ ಒಂದು ರೂಪಾಯಿ ನೀಡಿಲ್ಲ. ಆದರೆ, ಅನ್ಯ ರಾಜ್ಯಗಳಿಗೆ ಬಿಡುಗಡೆಗೊಳಿಸಿದೆ. ಈ ಬೇಸರದಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿರಬಹುದು ಎಂದರು.

ಐದು ಗ್ಯಾರಂಟಿ 5 ವರ್ಷ ಖಂಡಿತ ಕಾಂಗ್ರೆಸ್ ನೀಡಲಿದೆ. ಇದರಲ್ಲಿ ಅನುಮಾನ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಥಗಿತಗೊಳ್ಳಲಿದೆ ಎಂದು ಪಕ್ಷದ ಕೆಲ ಶಾಸಕರು ಹೇಳಿದ್ದಾರೆ ಹೊರತು ಲೋಕಸಭೆ ನಂತರ ಸ್ಥಗಿತವೆಂದು ಹೇಳಿಲ್ಲ ಎಂದು ತಿಳಿಸಿದರು.