filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.0005,0.0005; brp_del_sen:0.1000,0.1000; motionR: null; delta:null; bokeh:0; module: photo;hw-remosaic: false;touch: (-1.0, -1.0);sceneMode: 2621440;cct_value: 0;AI_Scene: (13, 0);aec_lux: 163.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 34; 
ಜಿಲ್ಲೆ

ಅಕ್ಷರದ ದಾರಿ ತೋರಿದ ಮಾತೆ

ಅರಟಾಳ: ಅಂದಾನುಕರಣೆ ವಿರುದ್ಧ ಹೋರಾಡಿ ಶಿಕ್ಷಣಕ್ಕೆ ಮಹತ್ವದ ತಿರುವು ನೀಡಿ, ಅನಕ್ಷರಸ್ಥ ಮಹಿಳೆಯರಿಗೆ ಅಕ್ಷರದ ದಾರಿ ತೋರಿದ ದೀಪ ಸಾವಿತ್ರಿಬಾಯಿ ಫುಲೆ ಎಂದು ಅಥಣಿ ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಹೇಳಿದರು.

ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಾವಿತ್ರಿಬಾಯಿ ಫುಲೆ ಫೌಂಡೇಶನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಬರೀ ಪುಸ್ತಕವಲ್ಲದೆ, ಆತ್ಮಸ್ಥೈರ್ಯ ಅವಶ್ಯಕ. ಪೂರ್ವಜರ ಬಗ್ಗೆ ತಿಳಿಸುವ ಮೂಲಕ ಫೌಂಡೇಶನ್ ಕಾರ್ಯ ಸ್ಪೂರ್ತಿದಾಯವಾಗಿದೆ ಎಂದರು.

ಡಿಎಸ್‌ಎಸ್ ಜಿಲ್ಲಾ ಪ್ರಮುಖ ಶಶಿ ಸಾಳವೆ ಮಾತನಾಡಿ, 18 ಶಾಲೆ ತೆರೆಯುವ ಮೂಲಕ ಭಾತರದ ಪ್ರಥಮ ಶಿಕ್ಷಕಿ ಎನ್ನುವ ಬಿರುದು ಪಡೆದವರು ಸಾವಿತ್ರಿಬಾಯಿ ಫುಲೆ ಎಂದರು. ಅಥಣಿ ಮಾಳಿ ಸಮುದಾಯದ ಮಹಾಂತೇಶ ಮಾಳಿ ಮಾತನಾಡಿದರು. ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಪಿಡಿಒ ಎ.ಜಿ.ಎಡಕೆ, ಸಮಾಜ ಕಲ್ಯಾಣ ಬಿ.ಎಸ್.ಯಾದವಾಡ, ಸಚಿನ ಬುಟಾಳಿ, ಶರಣಯ್ಯ ಹಿರೇಮಠ, ರವಿ ಬಡಕಂಬಿ, ಗಿರೀಶ ದಿವಾನಮಳ, ಪ್ರಶಾಂತ ತೋಡಕರ, ಶಶಿಧರ ಬರಲಿ, ಆರ್.ಎಂ.ಸಕ್ರಿ, ಧರೇಪ್ಪ ಸಿದ್ದಣತ, ವಕೀಲ ಎ.ಎಂ.ಖೋಬಿ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಶಿವಾನಂದ ಖ್ಯಾಡಿ, ಶಿವಾನಂದ ನೇಮಗೌಡ, ಫೌಂಡೇಶನ್ ಅಧ್ಯಕ್ಷ ಅಣ್ಣಪ್ಪ ಮಾಳಿ, ಪ್ರಕಾಶ ದಮಡಿ, ತಿಪ್ಪಣ ಮಾಳಿ, ರಾಮು ನಿಂಗನೂರ, ದತ್ತಾತ್ತೇಯ ನಿಂಬಾಳ್ಕರ್, ಶೆಟ್ಟೆಪ್ಪ ಕಾಂಬಳೆ, ಶಂಕರ ಮಾಳಿ, ಬಾಳೇಶ ಮಾಳಿ ಇತರರಿದ್ದರು. ಉಪನ್ಯಾಸಕ ಸದಾನಂದ ಮಾಡಗ್ಯಾಳ ನಿರೂಪಿಸಿದರು.