ಬಾಗಲಕೋಟೆ: ಜನರ ಆರೋಗ್ಯಕ್ಕೆ ಹಾನಿಕರವಾಗುವ ಮಾವಾ(ತಂಬಾಕು, ಸುಣ್ಣ, ಅಡಿಕೆ ಮತ್ತು ಇತರೆ ವಸ್ತುಗಳ ಮಿಶ್ರಣ) ತಯಾರಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರಿಗೆ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆ ಅಽಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಪಾರ ಪ್ರಮಾಣದ ಮಾವಾಕ್ಕೆ ಬಳಕೆ ಮಾಡುವ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ವಿನೋದ ದೊಡಮನಿ, ಸಾಬು ಹರಿಜನ ಎನ್ನುವವರ ಮನೆಗಳ ಮೇಲೆ ದಾಳಿ ನಡೆಸಿದ ಸಿಇಎನ್ ಪೊಲೀಸರು, ೧೭೦ ಮಾವಾ ಪಾಕೇಟ್‌ಗಳು, ಖುಲ್ಲಾ ತಯಾರಿಸಿದ ೫ ಕೆಜಿ ಮಾವಾ, ೧೩ ಕೆಜಿ ತಂಬಾಕು, ೬ ಕೆಜಿ ಸುಣ್ಣ, ೧೫೬ ಕೆಜಿ ಅಡಿಕೆ ಪುಡಿ, ೧ ಕೆಜಿ ಪ್ಲಾಸ್ಟಿಕ್ ಪ್ಯಾಂಕಿAಗ್ ಚೀಲಗಳು ಮತ್ತು ೨ ಮಾವಾ ವಸ್ತುಗಳ ಮಿಕ್ಸಿಂಗ್ ಮಷಿನ್ ಸೇರಿ ಒಟ್ಟು ೮೫,೦೭೦ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹಾಗೆಯೇ ಇಬ್ಬರು ಆರೋಪಿಗಳನ್ನು ಸಿಇಎನ್ ಠಾಣೆ ಪೊಲೀಸರು ಬಂಽಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಹಾಗೂ ಹಿರಿಯ ಅಽಕಾರಿಗಳ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಡಿಎಸ್ಪಿ ನೇತೃತ್ಚದಲ್ಲಿ ಪಿಎಸ್‌ಐ ನಿತೀನಕುಮಾರ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.