ಚಿಕ್ಕಮಗಳೂರು ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ದಂಟರಮಕ್ಕಿ ಬಡಾವಣೆ ನಿವಾಸಿಗಳು ನಗರಸಭೆ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರಾಜಕುಮಾರ್, ಡಿ.ಇ.ಹರೀಶ್, ಕುಮಾರ, ಗೌರಮ್ಮ, ಸೋಮಮ್ಮ, ಗಂಗಮ್ಮ ಮತ್ತಿತರರಿದ್ದರು. 
ಜಿಲ್ಲೆ

ಅಕ್ರಮವಾಗಿ ಮನೆ ನಿರ್ಮಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು: ನಗರದ ವಾರ್ಡ್ ಸಂಖ್ಯೆ ೨೩ರ ದಂಟರಮಕ್ಕಿ ಬಡಾವಣೆಯಲ್ಲಿ ನಗರಸಭೆ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಂಟರಮಕ್ಕಿ ನಿವಾಸಿಗಳು ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ರಸ್ತೆ ಮತ್ತು ಚರಂಡಿಗಾಗಿ ನಗರಸಭೆ ಜಾಗ ಬಿಟ್ಟಿತ್ತು. ಆದರೆ ಅದನ್ನು ಅಕ್ರಮವಾಗಿ ಇದೇ ಗ್ರಾಮದ ವಾಸಿಗಳಾದ ಶಿವಕುಮಾರ್ ಬಿನ್ ದಾಸಯ್ಯ, ಸೋಮಮ್ಮ ಕೋಂ. ಜನಾರ್ಧನ, ಪರಮೇಶ ಬಿನ್ ಚಿಕ್ಕಯ್ಯ, ಪ್ರೇಮ ಕೋಂ. ಧರ್ಮೇಂದ್ರ, ಚೆನ್ನಮ್ಮ ಕೋಂ. ರಾಜಣ್ಣ, ದಾಸಪ್ಪ ರಂಗಪ್ಪ ರತ್ನಮ್ಮ ಕೋಂ. ಗಂಗಾಧರ ಇವರುಗಳು ಈ ಜಾಗ ನಮಗೆ ಸೇರಿದೆ ಎಂದು ಚರಂಡಿ ಮತ್ತು ರಸ್ತೆ ಸೇರಿಸಿ ಮನೆ ನಿರ್ಮಿಸಿದ್ದಾರೆ ಎಂದು ದೂರಿದರು.

ಚರಂಡಿಯ ಕೊಳಚೆ ಹರಿದು ಹೋಗಲು ಅಡ್ಡಿಯಾದ ಕಾರಣ ನಿಂತ ಕೊಳಚೆ ನೀರಿನಿಂದ ದುರ್ವಾಸನೆ ಬರುತ್ತಿದೆ. ಹೆಚ್ಚಾದ ಸೊಳ್ಳೆಗಳಿಂದ ಅಕ್ಕ ಪಕ್ಕದ ಸುಮಾರು ೨೫-೩೦ ಕುಟುಂಬಗಳು ತೊಂದರೆ ಅನುಭವಿಸುವಂತಾಗಿದೆ. ಕೊಳಚೆ ನೀರಿನ ಅಸಹನೀಯ ದುರ್ವಾಸನೆಯಿಂದ ಮನೆಯಲ್ಲಿ ವಾಸ ಮಾಡಲು ಮತ್ತು ಆಹಾರ ಸೇವನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಳಚೆ ನೀರು ನಿಂತಿರುವುದರಿAದ ಅಕ್ಕ ಪಕ್ಕದಲ್ಲಿರುವ ಮನೆಗಳ ಗೋಡೆ ಶಿಥಿಲವಾಗಿ ಮಳೆಗಾಲದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಈ ಹಿಂದೆ ನಗರಸಭೆಗೆ ಹಲವಾರು ಬಾರಿ ದೂರು ಸಲ್ಲಿಸಿದ್ದು, ಸಂಬAಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳದೆ ಸಬೂಬು ಹೇಳುತ್ತಿದ್ದಾರೆ. ನಮ್ಮ ಕುಟುಂಬಗಳಿಗೆ ಕೊಳಚೆ ನೀರಿನಿಂದ ದುರ್ವಾಸನೆಯಲ್ಲಿ ಜೀವನ ನಡೆಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಿಡಿಎ ಮಾಜಿ ಸದಸ್ಯ ರಾಜಕುಮಾರ್, ಗ್ರಾಮಸ್ಥರಾದ ಡಿ.ಇ ಹರೀಶ್, ಕುಮಾರ, ಗೌರಮ್ಮ, ಸೋಮಮ್ಮ, ಗಂಗಮ್ಮ, ರೇವಮ್ಮ, ಮಲ್ಲೇಶ್, ನಾಗರಾಜ್ ಮತ್ತಿತರರಿದ್ದರು.