ಜಿಲ್ಲೆ

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವ ಬಂಧನ

ಹನೂರು: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಗುರುವಾರ ಹನೂರು ಪೊಲೀಸರು ಬಂಡಳ್ಳಿ ತೊಮಿಯಾರ್‌ಪಾಳ್ಯ ಮಾರ್ಗಮಧ್ಯೆ ಬಂಧಿಸಿದ್ದಾರೆ.


ಗ್ರಾಮದ ಸೀಗಪ್ಪ (28) ಎಂಬಾತನೇ ಬಂಧಿತ ಆರೋಪಿ. ಈತ ಬೆಳಗ್ಗೆ 9ರ ವೇಳೆಯಲ್ಲಿ ಗ್ರಾಮದಿಂದ ತೊಮಿಯಾರ್‌ಪಾಳ್ಯದ ಕಡೆಗೆ ಕಾರಿನಲ್ಲಿ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿ ತೊಮಿಯಾರ್‌ಪಾಳ್ಯದ ಬಳಿ ದಾಳಿ ನಡೆಸಿ ಕಾರನ್ನು ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದದು ಕಂಡುಬಂದಿದೆ. ವಿವಿಧ ಕಂಪನಿಯ 41.5 ಲೀಟರ್ ಮದ್ಯ ಹಾಗೂ ಕಾರನ್ನು ವಶಪಡಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸದ್ಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ರಾಜೇಂದ್ರಪ್ರಸಾದ್, ಎಎಸೈ ಶಿವರಾಜು, ಸಿಬ್ಬಂದಿ ಈಶ್ವರ್, ಚಂದ್ರಶೇಖರ್, ಪ್ರಭುಸ್ವಾಮಿ, ರಾಘವೇಂದ್ರ, ರಾಜು ಭಾಗವಹಿಸಿದ್ದರು.