ಜಿಲ್ಲೆ

ಅಕ್ರಮವಾಗಿ ಮದ್ಯ ಮಾರಾಟ‌ ಮಾಡುತ್ತಿದ್ದ ವ್ಯಕ್ತಿ ಬಂಧನ , ಇನ್ನೊಬ್ಬ ಪರಾರಿ

ಕಲಬುರಗಿ: ನಗರದ ಬೋರಾಬಾಯಿ ನಗರದ ಸಮೀಪದ ಶಹಾಹುಸೇನಿ ಚಿಲ್ಲಾ ಹತ್ತಿದಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿಯಂತೆ ಆರ್‌ಜಿ ನಗರ ಪೊಲೀಸರು ದಾಳಿ ನಡೆಸಿ ವ್ಯಕ್ತಿಯನ್ನು ಬಂಧಿಸಿದ್ಧಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ.
ನಾಗರಾಜ ಚಂದ್ರಕಾAತ ಎಂಬಾತನನ್ನು ಬಂಧಿಸಿ ಆತನ ಬಳಿಯಿದ್ದ ಮದ್ಯದ ೨೬ ಟೆಟ್ರಾ ಪ್ಯಾಕ್‌ಗಳನ್ನು ಹಾಗೂ ಮಾರಾಟದಿಂದ ಜಮೆಯಾಗಿದ್ದ ೨೬೦ ರೂ. ಜಪ್ತಿ ಮಾಡಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ, ಪಿಎಸ್‌ಐ ಭೀಮಣ್ಣ ಮತ್ತು ಸಿಬ್ಭಂದಿ ದಾಳಿ ನಡೆಸಿದ್ದಾರೆ. ಆರ್‌ಜಿ ನಗರದಲ್ಲಿ ಕೇಸ್ ದಾಖಲಾಗಿದೆ.