ಜಿಲ್ಲೆ

ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರ ದಾಳಿ

ವಿಜಯಪುರ: ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ಮೇಲೆ ಪೊಲೀಸರು ಶುಕ್ರವಾರ ದಾಳಿ ನಡೆಸಿ ಮೂವರನ್ನು ಬಂಧಿಸಿ 4,76,310 ರೂ. ಮೌಲ್ಯದ ಅಂದಾಜು 210.43 ಕ್ವಿಂಟಾಲ್​ (426 ಅಕ್ಕಿ ಚೀಲ) ಹಾಗೂ ಲಾರಿ ವಶಕ್ಕೆ ಪಡೆದಿದ್ದಾರೆ.ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದ ವಿಜಯಾ ಟಯರ್ಸ್​ ಬಲಿಯ ಸರ್ವಿಸ್​ ರಸ್ತೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಜಾನನ ಬೀರಪ್ಪ ಮಕಾಳೆ, ಮಾರುತಿ ದೊಡಮನಿ, ಬೆಳಗಾವಿ ಆಜಾದ ನಗರ ನಿವಾಸಿ ಇಕ್ಬಾಲ್​ ತಹಶೀಲ್ದಾರ್​ ಬಂಧಿತ ಆರೋಪಿಗಳು.

ಜಪ್ತು ಮಾಡಿಕೊಂಡಿರುವ ಅಕ್ಕಿಯನ್ನು ಕೆಎಫ್​ಸಿಎಸ್​ಸಿ ಸಗಟು ಮಳಿಗೆ ಸಂಖ್ಯೆ2 ರಲ್ಲಿ ಇರಿಸಲಾಗಿದೆ.ಜಿಲ್ಲಾ ಪೊಲೀಸ್​ ಅಧೀಕ ಲ್ಮಣ ನಿಂಬರಗಿ, ಎಎಸ್​ಪಿ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಡಿವೈಎಸ್​ಪಿ ಬಸವರಾಜ ಯಲಿಗಾರ, ಪೊಲೀಸ್​ ಅಧಿಕಾರಿ ಮಲ್ಲಯ್ಯ ಮಠಪತಿ, ಸೀತಾರಾಮ ಲಮಾಣಿ, ವಿಜಯಕುಮಾರ ಗುಮಶೆಟ್ಟಿ, ಪಿ.ಎಸ್​. ಕುಚಬಾಳ, ಸಿಬ್ಬಂದಿಗಳಾದ ಆರ್​.ಎಸ್​. ಮರೆಗುದ್ದಿ, ಪಿ.ಎಸ್​. ಆಜೂರ, ಮಸ್ತಾನ ಬಗಲಿ ದಾಳಿ ನಡೆಸಿದ್ದಾರೆ.

ವಿಜಯಪುರ ಹೊರವಲಯದ ಬೈಪಾಸ್​ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಅಕ್ಕಿ ಹಾಗೂ ಲಾರಿ ವಶಪಡಿಸಿಕೊಂಡಿರುವುದು. ಮಲ್ಲಯ್ಯ ಮಠಪತಿ, ಸೀತಾರಾಮ ಲಮಾಣಿ ಮತ್ತಿತರರಿದ್ದಾರೆ.