- ಕೊಳ್ಳೇಗಾಲ: ಪಟ್ಟಣದ ವಿವಿಧೆಡೆ ಮುಖ್ಯ ರಸ್ತೆಗಳ ಬದಿಯಲ್ಲಿ ನಗರಸಭೆಯ ನಿಯಮ ಉಲಂಘನೆ ಮಾಡಿ ಅಕ್ರಮ ಅಂಗಡಿ ಮಳಿಗೆಗಳು ತಲೆಎತ್ತಿದ್ದರೂ ಮೌನವಾಗಿರುವ ನಗರಸಭೆ ವರ್ತನೆ ವಿರುದ್ಧ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನಗರಸಭೆ ವ್ಯಾಪ್ತಿಯ 24ನೇ ವಾರ್ಡ್ ವ್ಯಾಪ್ತಿಯಲ್ಲಿಬರುವ ಆಗಸ್ಟಿನ್ ಕಾಲನಿಯಲ್ಲಿ ಎ-ಟು-ಜಡ್ ಅಂಗಡಿ ಪಕ್ಕದಲ್ಲಿರುವ ವಸತಿ ಮನೆಗೆ ಲಿಂಗಣಾಪುರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಹೆಚ್ಚುವರಿಯಾಗಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು ನಗರಸಭೆ ನಿಯಮ ಉಲಂಘಿಸಿ ಕಟ್ಟಡ ಕಟ್ಟಲಾಗಿದೆ. ಈ ಬಗ್ಗೆ ಆ ವಾರ್ಡ್ ಸದಸ್ಯ ಜಯರಾಜ್ ಅಂಗಡಿ ಮಳಿಗೆ ತೆರವಿಗೆ ನಗರಸಭೆ ಆಯುಕ್ತರಿಗೆ ಮನವಿ ಮಾಡಿದ್ದರು. ಪರಿಣಾಮ ಇತ್ತೀಚೆಗೆ ಆಯುಕ್ತ ನಂಜುಂಡಸ್ವಾಮಿ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿದ್ದು ತೆರವಿಗೆ ಕ್ರಮವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.