ಬಾಗೇಪಲ್ಲಿ: ಗೋವುಗಳನ್ನು ವಧೆ ಮಾಡಿ ಕಾನೂನು ಬಾಹಿರವಾಗಿ ಮೂಳೆ ಮತ್ತು ಕೊಂಬುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೈನರ್‌ನ್ನು ತಡೆದ ಬಿಜೆಪಿ ಕಾರ್ಯಕರ್ತರು, ಉತ್ತರ ಪ್ರದೇಶ ಹಾಗೂ ಜಾರ್ಖಂಡ್ ಮೂಲದ ಇಬ್ಬರು, ಬೆಂಗಳೂರು ಮೂಲದ ಒಬ್ಬನನ್ನು ಮಂಗಳವಾರ ಬಾಗೇಪಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೋತೆಪಲ್ಲಿ ಕ್ರಾಸ್ ಬಳಿ ಹೊರ ರಾಜ್ಯಗಳ ನೋಂದಣಿ ಸಂಖ್ಯೆಯ ಕಂಟೈನರ್‌ನಲ್ಲಿ ಗೋವುಗಳ ಮೂಳೆ ಹಾಗೂ ಕೊಂಬುಗಳನ್ನು ತುಂಬುತ್ತಿರುವ ಸ್ಥಳೀಯರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಬಿಜೆಪಿ ಕಾರ್ಯಕರ್ತರು, ಕಂಟೈನರ್ ಪರಿಶೀಲಿಸಿದಾಗ ಸಾವಿರಾರು ಗೋವುಗಳನ್ನು ವಧೆ ಮಾಡಿ ತಂದಿರುವ ಕೊಂಬು ಮತ್ತು ಮೂಳೆಗಳು ಪತ್ತೆಯಾಗಿವೆ. ವಾಹನ ಚಾಲಕರನ್ನು ಪ್ರಶ್ನಿಸಿದಾಗ ಮಾಹಿತಿ ನೀಡಲು ತಡಬಡಾಯಿಸಿದಾಗ ಅನುಮಾನಗೊಂಡು ಬಾಗೇಪಲ್ಲಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಬಾಗೇಪಲ್ಲಿ ಠಾಣೆ ಪಿಎಸ್‌ಐ ಗೋಪಾಲರೆಡ್ಡಿ ವಾಹನಗಳನ್ನು ತಪಾಸಣೆ ನಡೆಸಿದಾಗ ಕಂಟೈನರ್‌ಗಳಲ್ಲಿ ಗೋವುಗಳ ಕೊಂಬು ಮತ್ತು ಮೂಳೆ ಸೇರಿ ಗೋವುಗಳ ವಧೆಗೆ ಅಗತ್ಯವಿರುವ ಪರಿಕರಗಳ ಪತ್ತೆಯಾಗಿದ್ದು, ವಾಹನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಆರ್.ಪ್ರತಾಪ್, ಎಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ಜಿಲ್ಲಾ ಗೋಸಂರಕ್ಷಣ ಸಹ ಸಂಚಾಲಕ ಟಿ.ರಾಮಪ್ಪ, ಪಿ.ಡಿ.ವೆಂಕಟರಾಮ್, ಛಲವಾಧಿ ರಮೇಶ್, ನಾಗಪ್ಪ, ತಟ್ಟನ್ನಗಾರಿಪಲ್ಲಿ ಓಬಳೇಶ್, ದಲಿತಸೇನೆ ಸಾಯಿ, ಅಂಜಿನಪ್ಪ ಮತ್ತಿತರರು ಇದ್ದರು.
ಪ್ರಕರಣ ದಾಖಲು: ಅಕ್ರಮ ಸಾಗಾಣಿಕೆಯಲ್ಲಿ ಭಾಗಿಯಾಗಿರುವ ಬೆಂಗಳೂರಿನ ತೌಸಿಫ್(37), ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಸದಾಖತ್ ಅಲಿ(46), ಜಾರ್ಖಂಡ್‌ನ ಜೆಮ್‌ಷೆಡ್‌ದ ಮಹಮ್ಮದ್ ಬಷೀರ್ ಅನ್ಸಾರಿ ವಿರುದ್ಧ ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಗೇಪಲ್ಲಿ ತಾಲೂಕಿನ ಘಂಟವಾರಂಪಲ್ಲಿ ಗ್ರಾಮ ಪಂಚಾಯಿತಿ ನೀಡಿರುವ ಪೌಲ್ಟ್ರಿ ಾರ್ಮ್ ಹೆಸರಿನಲ್ಲಿ ಪೋತೆಪಲ್ಲಿ ಗ್ರಾಮದ ಬಳಿ ನಿರ್ಮಿಸಿರುವ ಗೋದಾಮಿನಲ್ಲಿ ಗೋವುಗಳ ಕೊಂಬುಗಳು ಹಾಗೂ ಮೂಳೆಗಳನ್ನು ದಾಸ್ತಾನು ಮಾಡಿ ಕಂಟೈನರ್‌ಗಳ ಮೂಲಕ ನಿತ್ಯ ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ ದಂಧೆ ಮುಂದುವರಿಸಿದ್ದರು ಎಂಬ ಆರೋಪ ಕೇಳಿಬಂದಿದೆ.