ಕಲಬುರಗಿ: ನಗರದ ಕೂಡಲ ಸಂಗಮ ಶಿಕ್ಷಣ ಸಂಸ್ಥೆಯ ಸಾಮಾನ್ಯ ಸಭೆಯನ್ನು ಕರೆಯಲು ಸಮಸ್ಯೆ ಒಡ್ಡುವ ಜತೆಗೆ ತಮಗೆ ಅವಕಾಶವಿದ್ದರೂ ಸಾಮಾನ್ಯ ಸಭೆ ಕರೆಯದೇ ಉತ್ತಮ ಸ್ಥಿತಿಯಲ್ಲಿರುವ ಸಂಸ್ಥೆಯೊAದನ್ನು ಹಾಳುಗೆಡವಲು ಸಹಕಾರ ಸಂಘಗಳ ಉಪ ನಿಬಂಧಕ ಕಿಶೋರ ಪಾಟೀಲ್ ಪ್ರಯತ್ನಿಸುತ್ತಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧಿಕಾರಯುಕ್ತ ಸದಸ್ಯ ಶಿವಶಂಕರ ಭುಜಂಗ ಆರೋಪಿಸಿದರು.
ಶಿಕ್ಷಣ ಸಂಸ್ಥೆಯಲ್ಲಿ ೩೮ ಶಿಕ್ಷಕರು, ಇಬ್ಬರು ಕ್ಲರ್ಕ್ ಇದ್ದು, ಸುಮಾರು ೭೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಹಳೇಯ ಅಧ್ಯಕ್ಷ ಆರ್.ಜಿ.ಶೆಟಗಾರ್ ಅಕ್ರಮ ಮಾಡಿದ್ದಾರೆ ಎಂದು ಸಾಮಾನ್ಯ ಸಭೆ ಕರೆದು, ಪ್ರಾಥಮಿಕ ಸದಸ್ಯತ್ವ ರದ್ದು ಮಾಡಲಾಗಿದೆ. ಆದರೆ ಸದಸ್ಯರಲ್ಲದ ಶೆಟಗಾರ ಆಕ್ಷೇಪಕ್ಕೆ ಉಪ ನಿಬಂಧಕ ಕಿಶೋರ ಪಾಟೀಲ್ ಕಾನೂನಿನಲ್ಲಿ ಅವಕಾಶವಿದ್ದರೂ ಸಾಮಾನ್ಯ ಸಭೆ ಕರೆಯದೇ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ತೊಡಕಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಆರ್.ಜಿ.ಶೆಟಗಾರ್ ಎಂಬುವವನ್ನು ಅಧ್ಯಕ್ಷ, ಸದಸ್ಯ ಸ್ಥಾನದಿಂದ ತೆಗೆದು ಹಾಕಲಾಗಿದೆ. ಅವರು ಕೋರ್ಟ್ಗೆ ಹೋದರೂ ಮಾನ್ಯ ಮಾಡಿಲ್ಲ. ಸಾಮಾನ್ಯ ಸಭೆಯಲ್ಲಿ ಬಹುಮತ ತೋರಿಸಿದ್ದರೂ ಸಭೆ ಕರೆಯುತ್ತಿಲ್ಲ. ಅನರ್ಹ, ಸಂಸ್ಥೆಗೆ ಸಂಬAಧವಿಲ್ಲದ ವ್ಯಕ್ತಿ ಜತೆ ಕೈ ಜೋಡಿಸಿ ಸರ್ಕಾರಿ ಅಧಿಕಾರಿ ಸಹಕಾರ ಸಂಘಗಳ ಉಪ ನಿಬಂಧಕ ಕಿಶೋರ ಪಾಟೀಲ್ ಸಂಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಎಂಟು ವರ್ಷದಿಂದ ಸಹಕಾರ ಇಲಾಖೆ ಉಪ ನಿಬಂಧಕರು ಒಳಗೊಂಡAತೆ ಎಲ್ಲ ಉನ್ನತ ಅಧಿಕಾರಿಗಳಿಗೆ ನೂರಾರು ಪತ್ರ ಬರೆದರೂ ಕನಿಷ್ಠ ಹಿಂಬರಹ ನೀಡಿಲ್ಲ. ಸಂಸ್ಥೆಯ ಸಾಮಾನ್ಯ ಸಭೆ ಕರೆದರೆ ಎಲ್ಲ ೩೧ ಸದಸ್ಯರು ಭಾಗವಹಿಸಿ, ಸಂಸ್ಥೆಯ ಏಳಿಗೆಯ ಚರ್ಚೆ, ನಿರ್ಣಯ ಕೈಗೊಳ್ಳುತ್ತೇವೆ. ಆದರೆ ಸಭೆ ಕರೆಯಲು ವಿನಾಕಾರಣ ತೊಡಕುಂಟು ಮಾಡಲಾಗುತ್ತಿದೆ. ಸಭೆ ಕರೆಯಲು ಅವಕಾಶ ನೀಡದಿದ್ದರೆ ಉಪನಿಬಂಧಕರ ಕಚೇರಿ ಎದುರು ಅನಿರ್ದಿಷ್ಠಾವಧಿಗೆ ಡಿ.೧೨ರಿಂದ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವಿನೋದಕುಮಾರ ಜನೇವರಿ, ಹಣಮಂತ ತರರಿದ್ದರು.