filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36; 
ಜಿಲ್ಲೆ

ಅಕ್ರಮ ಮದ್ಯ ಮಾರಿದರೆ 10,001 ರೂ. ದಂಡ

ಕೊಳ್ಳೇಗಾಲ: ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ 10,001 ರೂ. ದಂಡ, ಮಾರಿದವರನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟರೆ 5 ಸಾವಿರ ರೂ. ಬಹುಮಾನ ಅಂತೆ. ಇದು ಸರ್ಕಾರದಿಂದಾಗಲಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅಬಕಾರಿ ಇಲಾಖೆಯಿಂದಾಗಲಿ ಘೋಷಣೆ ಮಾಡಿರುವ ಬಹುಮಾನವಲ್ಲ. ಬಡಾವಣೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸಲೆಂದು ಸ್ಥಳೀಯರೇ ಹಾಕಿಕೊಂಡಿರುವ ನಿಬಂಧನೆ.

ಕೊಳ್ಳೇಗಾಲ ಪಟ್ಟಣದ ಮುಡಿಗುಂಡ ಬಡಾವಣೆಯ ಪರಿಶಿಷ್ಟ ಜಾತಿ, ಜನಾಂಗದ ಯಜಮಾನರು ಹಾಗೂ ಮುಖಂಡರು ಬಡಾವಣೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮದ್ಯ ತಡೆಗಟ್ಟಲು ಅವರೇ ಮಾಡಿಕೊಂಡ ತೀರ್ಮಾನ. ಮದ್ಯ ಅಕ್ರಮ ಮಾರಾಟದ ಜಾಲ ಸಮಾಜಕ್ಕೆ ಅಂಟಿಕೊಂಡ ಪಿಡುಗಾಗಿ ಬಾಧಿಸುತ್ತಿದೆ. ಕಿರಾಣಿ ಅಂಗಡಿಗಳು, ಪೆಟ್ಟಿಗೆ ಅಂಗಡಿಗಳು ಹಾಗೂ ಮನೆಗಳಲ್ಲಿಯೇ ಮದ್ಯ ಸಂಗ್ರಹಿಸಿಟ್ಟು ಹಣದಾಸೆಗೆ ಹೆಚ್ಚಿನ ಬೆಲೆಗೆ ಸ್ಥಳೀಯವಾಗಿ ಮಾರಾಟ ಮಾಡಿ ಯುವಕರು, ವಯಸ್ಕರು ಮದ್ಯ ವ್ಯಸನಕ್ಕೆ ತುತ್ತಾಗುತ್ತಿರುವುದನ್ನು ತಡೆಗಟ್ಟಲು ಈ ಬಡಾವಣೆಯ ಯಜಮಾನರು, ಮುಖಂಡರು ಚರ್ಚಿಸಿ ನಿರ್ಧಾರ ಕೈಗೊಂಡು ಮನೆ ಮನೆಗೆ ಅರಿವು ಮೂಡಿಸುವ ಸಲುವಾಗಿ ಕರಪತ್ರಗಳನ್ನು ಹಂಚಿದ್ದಾರೆ.

ಏಕೆ ಈ ತೀರ್ಮಾನ:

ಮುಡಿಗುಂಡ ಬಡಾವಣೆಯಲ್ಲಿ ಸುಮಾರು 4 ರಿಂದ 5 ಸಾವಿರ ಜನರಿದ್ದಾರೆ. ಪರಿಶಿಷ್ಟ ಜಾತಿ, ನಾಯಕರು, ಲಿಂಗಾಯತರು, ಕುಂಬಾರರು, ಸವಿತಾ ಸಮಾಜ, ಕುರುಬ ಸಮುದಾಯ ಇನ್ನಿತರ ಸಮುದಾಯ ಜನರು ವಾಸವಿದ್ದಾರೆ. ಇವರಲ್ಲಿ 1500 ಸಾವಿರ ಜನರು ಪರಿಶಿಷ್ಟ ಜಾತಿ ಜನರಿದ್ದಾರೆ. ಕೃಷಿ, ರೇಷ್ಮೆ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಹಾಗೂ ಗಾರೆ ಕೆಲಸವೇ ಇವರ ಬದುಕಿನ ಆದಾಯದ ಮೂಲವಾಗಿದೆ. ಆದರೆ ಪರಿಶಿಷ್ಟ ಜಾತಿ ಜನಾಂಗದ ಬೀದಿಯಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ನಡೆಯುತ್ತಿದ್ದ ಮದ್ಯ ಮಾರಾಟದಿಂದ ಕೂಲಿ ಕಾರ್ಮಿಕರು ವಿಪರೀತ ಮದ್ಯ ಸೇವಿಸಿ ಆರೋಗ್ಯ ಹದಗೆಡಿಸಿಕೊಳ್ಳುವುದಲ್ಲದೆ, ಕೌಟುಂಬಿಕ ಕಲಹಕ್ಕೂ ಕಾರಣ ವಾಗಿತ್ತು. ಕೂಲಿ ಕಾರ್ಮಿಕರು ಸಾಲದ ಸುಳಿಗೆ ಸಿಲುಕುತ್ತಿದ್ದರು. ಯುವಕರು ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದರು. ಇದನ್ನೆಲ್ಲ ಮನಗಂಡ ಯಜಮಾನರು ಬಡಾವಣೆಯಲ್ಲಿ ಮದ್ಯ ಅಕ್ರಮಕ್ಕೆ ಬ್ರೇಕ್ ಹಾಕಲು ಕ್ರಮವಹಿಸಿದ್ದಾರೆ.

ತಾಲೂಕಿನಾದ್ಯಂತ ಜನರ ಆಕ್ರೋಶ: ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯ ತಾಲೂಕಿನಾದ್ಯಂತ ಇದೆ. ಪೊಲೀಸ್ ಇಲಾಖೆ ಕರೆಯುವ ಎಸ್ಸಿ-ಎಸ್ಟಿ ಸಭೆಗಳಲ್ಲಿ ಬರುವ ದೂರುಗಳಲ್ಲಿ ಈ ವಿಚಾರವೇ ಪ್ರಮುಖವಾಗಿರುತ್ತದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕೆಂದು ಜನರು ದೂರಿನ ಸುರಿಮಳೆ ಗೈಯುತ್ತಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸುತ್ತಿದೆ. ಆದರೆ, ತಾಲೂಕಿನ ವಿವಿಧ ಗ್ರಾಮಗಳು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಕೆಲವು ಬಡಾವಣೆಗಳಲ್ಲಿ ನಡೆಯುತ್ತಿರುವ ಈ ಜಾಲವನ್ನು ಸಂಪೂರ್ಣವಾಗಿ ಭೇದಿಸಲು ಸಾಧವಾಗಿಲ್ಲ. ಹೀಗಾಗಿ ಮುಡಿಗುಂಡ ಗ್ರಾಮದ ಪರಿಶಿಷ್ಟ ಜಾತಿ ಜನಾಂಗದ ಕುಲಸ್ಥರು ಅಕ್ರಮವಾಗಿ ಮದ್ಯ ಮಾರಾಟ ಮಾಡಿದರೆ 10,001 ರೂ.ದಂಡ, ಮಾರಿದವರನ್ನು ಸಾಕ್ಷಿ ಸಮೇತ ಹಿಡಿದು ಕೊಟ್ಟರೆ 5 ಸಾವಿರ ರೂ. ಬಹುಮಾನ ಎಂದು ಘೋಷಣೆ ಮಾಡಿ ಕೊಂಡಿದ್ದಾರೆ. ಈ ದಂಧೆಯನ್ನು ಬುಡಮೇಲು ಮಾಡಲು ಮುಂದಾಗಿದ್ದಾರೆ.

ಅಕ್ರಮ ಮದ್ಯ ಮಾರಾಟ ಬಡಾವಣೆಯಲ್ಲಿ ಮಿತಿ ಮೀರಿತ್ತು. ಮದ್ಯ ಸುಲಭವಾಗಿ ಸಿಗುವ ಕಾರಣ ಯುವಕರುಭವಿಷ್ಯ ಹಾಳು ಮಾಡಿ ಕೊಳ್ಳುತ್ತಿದ್ದರು. ಕೌಟುಂಬಿಕ ಕಲಹಗಳಿಗೂ ಅವಕಾಶ ಆಗುತ್ತಿತ್ತು. ಹೀಗಾಗಿ ಬಡಾವಣೆ ಯಜಮಾನರು, ಮುಖಂಡರು ಹಾಗೂ ಪ್ರಜ್ಞಾವಂತರು ಅಕ್ರಮ ಮದ್ಯ ಮಾರಾಟ ಮಾಡಿದವರಿಗೆ ಕುಲದಿಂದ ದಂಡ ಕಟ್ಟಿಸಲಾಗುತ್ತದೆ. ನಿಯಮ ಉಲಂಘಿಸಿದರೆ ಅಂತಹವರ ಮೇಲೆ ಪೊಲೀಸರಿಗೆ ದೂರು ನೀಡಲಾಗುತ್ತದೆ. ಸಾಕ್ಷಿ ಸಮೇತ ಮಾರಾಟಗಾರರನ್ನು ಹಿಡಿದು ಕೊಟ್ಟವರಿಗೆ 5 ಸಾವಿರ ರೂ. ನೀಡುವುದಾಗಿ ತಿರ್ಮಾನಿಸಿದ್ದೇವೆ. ಜಗದೀಶ್, ಯಜಮಾನ, ಮುಡಿಗುಂಡ ಬಡಾವಣೆ