ಚಿತ್ರದುರ್ಗ: ಚಳ್ಳಕೆರೆ ತಾಲೂಕು ಮಲ್ಲಸಮುದ್ರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮ,ಆಂಧ್ರಪ್ರದೇಶದ ಗಡಿಭಾಗದಲ್ಲಿ ಗ್ರಾಮ ಸೇರಿರುವುದರಿಂದ ಆಂಧ್ರದಿಂದ ಬರುವಂಥ ಸಂಖ್ಯೆ ಹೆಚ್ಚಿದೆ. ಗ್ರಾಮದಲ್ಲಿ ನಿತ್ಯ ಗ ಲಾಟೆ ಸಾಮಾನ್ಯವಾಗಿದೆ. ಮಹಿಳೆಯರು, ಮಕ್ಕಳು ನಿರ್ಭಯವಾಗಿ ಗ್ರಾಮದಲ್ಲಿ ಓಡಾಡುವುದು ಕಷ್ಟವಾಗಿದೆ. ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಆಗ್ರಹಿಸಿ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈ ಗೊಂಡಿಲ್ಲ ವೆಂದು ಪ್ರತಿಭಟನಾ ನಿರತರು ದೂರಿದರು.
ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಕೆ.ಪಿ.ಭೂತ ಯ್ಯ,ಎಂ.ಯಶೋಧ, ತಿಮ್ಮಕ್ಕ, ಕಲ್ಲಮ್ಮ, ಶಾರದಮ್ಮ, ಹೊನ್ನೂರಮ್ಮ, ನಂದಿನಿ, ನಾಗಮ್ಮ, ಶಿಲ್ಪಾ, ಭಾಗ್ಯಮ್ಮ, ರತ್ನಮ್ಮ, ಮಾರಕ್ಕ, ಯಲ್ಲಕ್ಕ, ಪೆನ್ನಕ್ಕ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.