ಜಿಲ್ಲೆ

ಅಕ್ರಮ ಗೋಸಾಗಾಟ: ಕುಂದಾಪುರ ಪೋಲಿಸರಿಂದ 16 ಗೋವುಗಳ ರಕ್ಷಣೆ

ಕುಂದಾಪುರ: ಮಹಾರಾಷ್ಟ್ರದ ಸೊಲ್ಲಾಪುರ ದಿಂದ KA19-A1801ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ಮಂಗಳೂರಿನತ್ತ ಕಳ್ಳ ಸಾಗಣೆ ಮಾಡುತ್ತಿರುವ ವಾಹನವನ್ನು ಪೊಲೀಸರು ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ಡಿವೈಎಸ್ ಪಿ ಶ್ರೀಕಾಂತ್, ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಹಾಗೂ ಸಿಬ್ಬಂದಿ ಗುರುವಾರ ಬೆಳಗಿನ ಜಾವ ತ್ರಾಸಿ ಮರವಂತೆ ಸಮುದ್ರ ಕಿನಾರೆಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ, ಅವರು ಬಿಟ್ಟು ಹೋದ ವಾಹನವನ್ನು ಮುಟ್ಟುಗೊಲು ಹಾಕಿ,16 ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.