ಜಿಲ್ಲೆ

ಅಕ್ರಮ ಗೋಸಾಗಣೆಗೆ ತಡೆ

ಕಲಬುರಗಿ: ನಗರದ ಶಹಾಬಾದ್ ರಿಂಗ್ ರಸ್ತೆಯಲ್ಲಿ ಅಕ್ರಮವಾಗಿ ಗೋಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆದು, ಆಕಳು ಮತ್ತು ಹೋರಿಯನ್ನು ರಕ್ಷಿಸಿರುವ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಶಹಾಬಾದ್ ಮಾರ್ಗದಿಂದ ಕಲಬುರಗಿ ನಗರ ಪ್ರವೇಶಿಸುತ್ತಿದ್ದ ಗೂಡ್ಸ್ ವಾಹನವನ್ನು ರಾಘವೇಂದ್ರ ಬಸವರಾಜಯ್ಯ ಸ್ನೇಹಿತರೊಂದಿಗೆ ಅನುಮಾನದ ಆಧಾರದಲ್ಲಿ ಪರಿಶೀಲಿಸಿದಾಗ ಅದರಲ್ಲಿ ಆಕಳು ಮತ್ತು ಹೋರಿಯನ್ನು ಉಸಿರುಗಟ್ಟಿಸುವಂತೆ ಬಿಗಿದು, ದಾಖಲೆ ಇಲ್ಲದೆ ಸಾಗಿಸುತ್ತಿರುವುದು ತಿಳಿದು ಬಂದಿದೆ. ವಿಚಾರಿಸಿದಾಗ ಚಾಲಕ ಶಕೀಲ ಘನಿ, ಮಹ್ಮದ್ ಇಬ್ರಾಹಿಂ, ಮೆಹೆಬೂಬ್ ಪಠಾಣ ಫಾರ್ಮಾ ಹೌಸ್‌ಗೆ ಗೋವುಗಳನ್ನು ಸಾಗಿಸುತ್ತಿz್ದÉÃವೆ ಎಂದು ತಿಳಿಸಿದ್ದಾರೆ. ನಂತರ ೧೧೨ ಪೊಲೀಸರ ಸಹಾಯದೊಂದಿಗೆ ಬಸವರಾಜಯ್ಯ ಮತ್ತು ಸ್ನೇಹಿತರು ಗೋವು, ವಾಹನವನ್ನು ಠಾಣೆಗೆ ತಂದು ಒಪ್ಪಿಸಿದ್ದು, ಉಸಿರುಗಟ್ಟಿಸಿ ಸಾಯುವ ಸ್ಥಿತಿಯಲ್ಲಿ ಗೋ ಸಾಗಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.