ಕಳಸ ಪೊಲೀಸ್ ಠಾಣೆಗೆ ವಿಹಿಂಪ, ಬಜರಂಗದಳ ಪ್ರಖಂಡ ಮನವಿ ಸಲ್ಲಿಸಿದರು. ಅಜಿತ್ ಕುಲಾಲ್, ಸಂತೋಷ್ ಮೂಲ್ಯ, ದೀಕ್ಷಿತ್ ಇತರರಿದ್ದರು.  
ಜಿಲ್ಲೆ

ಅಕ್ರಮ ಗೋಸಾಗಣೆ ತಡೆಯಿರಿ

ಕಳಸ: ಕಳಸ ಭಾಗದಲ್ಲಿ ಗೋಕಳವು ಮತ್ತು ಅಕ್ರಮ ಗೋಸಾಗಣೆ ತಡೆಗಟ್ಟಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕಳಸ ಪ್ರಖಂಡದಿಂದ ಕಳಸ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.

ಕಳಸದ ಸುತ್ತಮುತ್ತಲಿನ ಪ್ರದೇಶಗಳಾದ ಬಾಳೆಹೊಳೆ, ಹೊರನಾಡು, ಹಿರೇಬೈಲ್ ಮುಂತಾದೆಡೆ ಅಕ್ರಮವಾಗಿ ಗೋವುಗಳ ಸಾಗಣೆ ಮಾಡುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ. ಬಜರಂಗದಳ ಜಿಲ್ಲಾ ಸಂಚಾಲಕ ಅಜಿತ್ ಕುಲಾಲ್, ವಿಹಿಂಪ ತಾಲೂಕು ಕಾರ್ಯದರ್ಶಿ ಸಂತೋಷ್ ಮೂಲ್ಯ, ತಾಲೂಕು ಸಂಯೋಜಕ ಸುಜಿಲ್ ಬೋನಡ್ಕ, ಗೋರಕ್ಷ ಪ್ರಮುಖ್ ದೀಕ್ಷಿತ್ ಇತರರಿದ್ದರು.