ಜಿಲ್ಲೆ

ಅಕ್ರಮ ಗೋವು ಸಾಗಾಟ: ಆರು ಜನ ಆರೋಪಿಗಳ ಬಂಧನ

ಬೇಲೂರು : ಕಸಾಯಿ ಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿರುವ ಬೇಲೂರು ಪೊಲೀಸರು ಗೋ ಸಾಗಾಣೆ ಆರೋಪದಡಿ ಪ್ರಕರಣ ದಾಖಲಿಸಿ ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.


ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಯಗಚಿ ನದಿ ಸಮೀಪದಲ್ಲಿರುವ ಮಂಜುನಾಥ ಕಲ್ಯಾಣ ಮಂಟಪದ ಆವರಣದಲ್ಲಿ ಶನಿವಾರ ರಾತ್ರಿ ಐದು ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೇಲೂರು ಪೊಲೀಸರು ಗೋವುಗಳೊಂದಿಗೆ 7 ಜನ ಆರೋಪಿಗಳಾದ 24 ವರ್ಷದ ಅಬ್ರಾರ್, 17 ವರ್ಷದ ಪವನ್, 26 ವರ್ಷದ ಹರ್ಷತ್‌ಖಾನ್, 28 ವರ್ಷದ ವಾಸಿಂ, 18 ವರ್ಷದ ಮಹಮದ್ ಫಯಾಜ್, 24 ವರ್ಷದ ಆನೀಮ್ ಉದ್ದೀನ್, 33 ವರ್ಷದ ಸಯ್ಯದ್ ಇಮ್ರಾನ್‌ರನ್ನು ವಶಕ್ಕೆ ಪಡೆದು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಳಿಸಿ ಎಲ್ಲ ಏಳು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತನಿಖೆ ಕೈಗೊಂಡಿದ್ದಾರೆ.


ಆರೋಪಿಗಳನ್ನು ಬಂಧಿಸುವಲ್ಲಿ ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್, ಸಿಬ್ಬಂದಿ ದೇವೇಂದ್ರ, ಚೇತನ್, ನಾಗೇಶ್, ರಮೇಶ್ ಇದ್ದರು.