ಜಿಲ್ಲೆ

ಅಕ್ರಮ ಗಾಂಜಾ ವಶ, ಇಬ್ಬರು ಸೆರೆ

ಬಳ್ಳಾರಿ : ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಆರೋಪಿಗಳನ್ನು ಬಂಧಿಸಿ, 2 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಒಡಿಸ್ಸಾ ರಾಜ್ಯದ ಜಿಕಾರಿಯಾ, ಜೋಹನ್ ಬಂಧಿತ ಆರೋಪಿಗಳು. ಇಲ್ಲಿನ ನಲ್ಲಚೆರವು ಪ್ರದೇಶದಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ, ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.