ಮಧುಗಿರಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. ಮಧುಗಿರಿ ತಾಲೂಕು ಸಿದ್ದಾಪುರ ಗೊಲ್ಲರಹಟ್ಟಿ ಕ್ರಾಸ್ ಬಳಿ ಗಾಂಜಾ ಮಾರುತ್ತಿದ್ದ ಮಧುಗಿರಿ ಪಟ್ಟಣದ ಖಾಜಿಮೊಹಲ್ಲಾದ ಮೊಹಮ್ಮದ್ ಅರ್ಷು (24)ನನ್ನು ಬುಧವಾರ ಸಂಜೆ ಮಧುಗಿರಿ ಪೊಲೀಸರು ಬಂಧಿಸಿ ಆತನ ಬಳಿಯಿಂದ 4500 ರೂ., ಮೌಲ್ಯದ 215 ಗ್ರಾಂ ತೂಕದ ಗಾಂಜಾ ಸೊಪ್ಪನ್ನು ವಶಪಡಿಸಿಕೊಂಡಿರುತ್ತಾರೆ.
3 ಕೆಜಿ ಗಾಂಜಾ ಸೊಪು$್ಪ: ಹೆಬ್ಬೂರು ಠಾಣಾ ವ್ಯಾಪ್ತಿಯ ನಾಗವಲ್ಲಿಯಿಂದ ಸಿರಿವಾರ ಕಡೆಗೆ ಹೋಗುವ ರಸ್ತೆಯ ತಿರುವಿನಲ್ಲಿ ಅನುಮಾನಸ್ಪದವಾಗಿ ಬ್ಯಾಗ್ ಹಿಡಿದು ನಿಂತಿದ್ದ ಬೆಂಗಳೂರಿನ ಕಾಚೋಹಳ್ಳಿಯ ಮಹಮದ್ ಮುಬಾರಕ್ (40)ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಅಕ್ರಮವಾಗಿ 3.5 ಲಕ್ಷ ರೂ., ಮೌಲ್ಯದ 3.5 ಕೆಜಿ ಗಾಂಜಾ ಸೊಪು$್ಪ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ಇನ್ನಿಬ್ಬರು ಆರೋಪಿಗಳು: ಬಡವನಹಳ್ಳಿಯಿಂದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಗಾಂಜಾ ಸೊಪು$್ಪ ಮಾರಾಟ ಮಾಡಲು ಪ್ಲಾಸ್ಟಿಕ್
ಕವರ್ ಇಟ್ಟುಕೊಂಡಿದ್ದ ದೊಡ್ಡೇರಿಯ ತಿಪ್ಪೇಶ್ (26), ಕೋಳಿ ವ್ಯಾಪಾರಿ ಜಲಾಲ್ (21)ರನ್ನು ಬಂಧಿಸಲಾಗಿದೆ. 12 ಸಾವಿರ ಮೌಲ್ಯದ 300 ಗ್ರಾಂ ತೂಕದ
ಗಾಂಜಾ ಸೊಪ್ಪನ್ನು ಬಡವನಹಳ್ಳಿ ಠಾಣೆ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಈ ಕಾರ್ಯಾಚರಣೆ ನಡೆಸಿದ
ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದಾರೆ.