ಜಿಲ್ಲೆ

ಅಕ್ರಮ ಗಣಿಗಾರಿಕೆ ತಡೆಗೆ ಚೆಕ್‌ಪೋಸ್ಟ್‌

ಚಿತ್ರದುರ್ಗ: ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ,ಸಾಗಾಣಿಕೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಸಿ ಕಚೇರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಟಾಸ್ಕ್‌ಫೋರ್ಸ್(ಗಣಿ)ಸಮಿತಿ,ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾ ಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಅಕ್ರಮಗಳ ತಡೆಗೆ ಖನಿಜ ಸಾಗಾಣಿಕೆ ಮಾರ್ಗಗಳ ಪ್ರಮುಖ ಜಂಕ್ಷನ್‌ಗಳು, ಹಾಗೂ ಅಂತರ್‌ರಾಜ್ಯಗಡಿಗಳಲ್ಲಿ ತನಿಖಾ ಠಾಣೆಗಳನ್ನು ಸ್ಥಾಪಿಸಬೇಕೆಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕ ಮಹೇಶ್ ಮಾತನಾಡಿ,ಸರ್ಕಾರದಿಂದ ಜಿಲ್ಲೆಗೆ ವರ್ಷಕ್ಕೆ 740 ಕೋಟಿ ರೂ.ಸಂಗ್ರಹ ಗುರಿ ಇದ್ದು, ಜನವರಿ ಅಂತ್ಯದ ಗುರಿ 592 ಕೋಟಿ ರೂ.ಮೊತ್ತದ ಮುಖ್ಯಖನಿಜ ಮತ್ತು ಉಪ ಖನಿಜ ಗಣಿ ಗುತ್ತಿಗೆಗಳಿಂದ 494.23 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ ಎಂದರು. ಡಿಸಿ ಹಾಗೂ ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಅವರು ಶೇ.ನೂರು ಗುರಿ ಸಾಧನೆಗೆ ತಾಕೀತು ಮಾಡಿದರು.
ಗಣಿ ಗುತ್ತಿಗೆಗಳ ಮಂಜೂರು ಕೋರಿಕೆ ಅರ್ಜಿಗಳನ್ನು ತ್ವರಿತ ವಿಲೇ ಮಾಡಬೇಕೆಂದು ಸಮಿತಿ ಎಲ್ಲ ಸದಸ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿ ದರು. ಕೆಎಂಎಂಸಿಆರ್-1994 ರ ನಿಯಮ 3-ಎಫ್ ಅಡಿ ಕುಲಕಸಬುದಾರರ ಜೀವನೋಪಾಯಕ್ಕಾಗಿ ಈಗಾಗಲೇ 15 ಕಲ್ಲುಕ್ವಾರಿಗಳನ್ನು ಗುರುತಿಸಿ ನಿರಾಕ್ಷೇಪಣಾ ಪತ್ರಗಳಿಗೆ ಕಂದಾಯ ಹಾಗೂ ಅರಣ್ಯಇಲಾಖೆಗಳಿಗೆ ಪತ್ರ ಬರೆಯಲಾಗಿದೆ.
ಹೊಳಲ್ಕೆರೆ ತಾಲೂಕಿನ 3 ಮತ್ತು ಮೊಳಕಾಲ್ಮೂರು ತಾಲೂಕಿನ 1 ಬ್ಲಾಕ್‌ಗೆ ನಿರಾಕ್ಷೇಪಣಾ ಪತ್ರಗಳು ಸ್ವೀಕೃತಿಯಾಗಿದ್ದು,ಅರ್ಹ ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಬ್ಲಾಕ್‌ಗಳ ಮಂಜೂರಿಗೆ ಸಭೆ ತಿರ್ಮಾನಿಸಿತು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್,ಡಿಎಫ್‌ಒ ಟಿ.ರಾಜಣ್ಣ, ಆರ್‌ಟಿಒ ಭರತ್‌ಕಾಳೆಸಿಂಘೆ,ಪಿಡಬ್ಲೂೃಡಿ ಇಇ ಮಲ್ಲಿಕಾರ್ಜುನ್,ಪರಿಸರ ಅಧಿಕಾರಿ ಪ್ರಕಾಶ್ ಮತ್ತಿತರರು ಇದ್ದರು.